RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಕಡೆಗಾಣಿಸಿತ್ತಿದ್ದಾರೆ : ಭೀರಪ್ಪ ಖಿಲಾರಿ

ಘಟಪ್ರಭಾ:ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಕಡೆಗಾಣಿಸಿತ್ತಿದ್ದಾರೆ : ಭೀರಪ್ಪ ಖಿಲಾರಿ 

ಘಟಪ್ರಭಾ ಪ್ರೆಸ್‍ಕ್ಲಬ್‍ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಹಾಲು ಮತ ಯುವ ವೇದಿಕೆಯ ಪದಾಧಿಕಾರಿಗಳು.

ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಕಡೆಗಾಣಿಸಿತ್ತಿದ್ದಾರೆ : ಭೀರಪ್ಪ ಖಿಲಾರಿ
ಘಟಪ್ರಭಾ ಎ 12 : ರಾಜ್ಯದಲ್ಲಿ ಕುರುಬ ಸಮುದಾಯದ ಮತಗಳು ಎರಡನೇ ಸ್ಥಾನದಲ್ಲಿದ್ದರೂ ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಸಮುದಾಯವನ್ನು ಕಡೆಗಾಣಿಸಿತ್ತಿದ್ದಾರೆ ಎಂದು ಹಾಲುಮತ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಭೀರಪ್ಪ ಖಿಲಾರಿ ಆರೋಪಿಸಿದರು.
ಅವರು ಗುರುವಾರದಂದು ಘಟಪ್ರಭಾ ಪ್ರೆಸ್‍ಕ್ಲಬ್‍ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಅಖಂಡ ಬೆಳಗಾವಿ (ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ) ಕ್ಷೇತ್ರದಲ್ಲಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಜನ ಕುರುಬ ಸಮಾಜ ಬಾಂದವರಿದ್ದು, ವಿಶೇಷವಾಗಿ ಭಾರತೀಯ ಜನತಾ ಪಕ್ಷದವರು ಸಾಮಾಜಿಕ ನ್ಯಾಯ ಹಾಗೂ ಜನಸಂಖ್ಯೆ ಅನುಪಾತದಲ್ಲಿ ಕನಿಷ್ಠ 2 ರಿಂದ 3 ಕ್ಷೇತ್ರದಲ್ಲಾದರೂ ಕುರುಬ ಸಮಾಜದಿಂದ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕುರುಬ ಸಮಾಜದ ಮುಖಂಡರು ಹಾಗೂ ಬಿಜೆಪಿ ಹಿರಿಯ ಕಾರ್ಯಕರ್ತರಾದ ಲಕ್ಷ್ಮಣ ತಪಶಿಯವರು ಬಿಜೆಪಿಯಲ್ಲಿ ಹಲವಾರು ವರ್ಷಗಳಿಂದ ಪಕ್ಷ ನಿಷ್ಠೆಯಿಂದ ಪಕ್ಷ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತ ಬಂದಿದ್ದಾರೆ. ಈಗ ಅವರು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೇಟಿಗಾಗಿ ಅರ್ಜಿ ಸಲ್ಲಿಸಿದ್ದು, ನಮ್ಮ ಸಮಾಜದ ಸಂಪೂರ್ಣ ಬೆಂಬಲ ಅವರಿಗೆ ಇದೆ. ಕಾರಣ ತಪಶಿಯವರಿಗೆ ಗೋಕಾಕ ಮತಕ್ಷೇತ್ರದ ಟಿಕೇಟ್ ನಿಡಿದ್ದೇ ಆದರೆ ಗೆಲವು ನಿಶ್ಚಿತ ಎಂದು ಹೇಳಿದರು.
ಗೋಕಾಕ ತಾಲೂಕಿನ ಕುರುಬ ಸಮಾಜದ ಮುಖಂಡರಾದ ಡಾ.ಪ್ರಮೋದ ಎತ್ತಿನಮನಿ ಮಾತನಾಡಿ, ಪಕ್ಷ ಬೆಳೆಸುವ ಸಲುವಾಗಿ ಪಕ್ಷದ ತತ್ವ ಸಿದ್ಧಾಂತ ಗೊತ್ತಿಲ್ಲದ ಆಮದು ನಾಯಕರನ್ನು ತಂದು ಬಿಜೆಪಿಯವರು ಟಿಕೇಟ್ ನೀಡುತ್ತಿರುವುದು ಮೂರ್ಖತನದ ಪರಮಾವದಿ. 30 ವರ್ಷಗಳಿಂದ ಪಕ್ಷದಲ್ಲಿದ್ದು ಪಕ್ಷದ ಏಳ್ಗೇಗಾಗಿ ಹಗಲಿರುಳು ದುಡಿತ್ತಿರುವವರನ್ನು ಬಿಟ್ಟು ನಿನ್ನೆ ಮೂನ್ನೆ ಪಕ್ಷಕ್ಕೆ ಬಂದವರನ್ನು ದೊಡ್ಡ ನಾಯಕರಂತೆ ಬಿಂಬಿಸುತ್ತುವುದು ಸರಿಯಲ್ಲ. ಇದನ್ನು ಕುರುಬ ಸಮಾಜವು ಬಲವಾಗಿ ಖಂಡಿಸುತ್ತದೆ. ಕಾರಣ ಪಕ್ಷದ ರಾಜ್ಯ ಹಾಗೂ ಜಿಲ್ಲಾ ನಾಯಕರು ಎಚ್ಚತ್ತುಕೊಂಡು ಪಕ್ಷದಲ್ಲಿ ನಿಷ್ಠೆ ಇರುವ ವ್ಯಕ್ತಿಗೆ ಪಕ್ಷದ ಅಧಿಕೃತ ಟಿಕೇಟ ನೀಡಿ ನ್ಯಾಯ ದೊರಕಿಸಿಕೋಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಸದಸ್ಯರಾದ ನಿಂಗಪ್ಪ ಪೂಜೇರಿ, ಹಾಲು ಮತ ಯುವ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಭರಮಣ್ಣಾ ತೋಳಿ, ಸಿದ್ದಪ್ಪ ಜಿಂಗಿ, ಭರಮು ಪೂಜೇರಿ, ಭೀಮ ಮಂಗಿ ಸೇರಿದಂತೆ ಗೋಕಾಕ ತಾಲೂಕಿನ ಕುರುಬ ಸಮಾಜದ ಮುಖಂಡರು ಇದ್ದರು.

Related posts: