RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ

ಮೂಡಲಗಿ:ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ 

ಮೂಡಲಗಿ ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ 127 ನೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಿಸಿದರು.

ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ

ಮೂಡಲಗಿ ಎ 14 :ಸಂವಿದಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜೀವನ ತತ್ವ ಸಿದ್ದಾಂತಗಳು ಮಾದರಿಯಾಗಿದ್ದು, ವಿಶ್ವಕ್ಕೆ ಮಾದರಿಯಾಗುವಂತಹ ಪ್ರಜಾಪ್ರಭುತ್ವದ ತಳಹದಿಯ ಸಂವಿದಾನವನ್ನು ನೀಡಿದ್ದಾರೆ. ಸಂವಿದಾನದ ಆಸೆಯದಂತೆ ಹಕ್ಕುಗಳು ಮತ್ತು ಕರ್ತವ್ಯಗಳು ನಿರ್ವಹಣೆ ನಮ್ಮೇಲ್ಲರ ಜವಾಬ್ದಾರಿ ಎಂದು ಬಿ.ಆರ್.ಪಿ ಕೆ.ಎಲ್.ಮೀಶಿ ಹೇಳಿದರು.
ಅವರು ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ ಜರುಗಿದ 127 ನೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಪಿ.ಜಿ ಪಾಟೀಲ, ಬಿ.ಎಮ್ ನಂದಿ, ಎ.ಬಿ ಚವಡನ್ನವರ, ಬಿಐಇಆರ್‍ಟಿಗಳಾದ ವಾಯ್.ಬಿ ಪಾಟೀಲ, ವಾಯ್ ಆರ್ ಮುಕ್ಕನ್ನವರ, ಆರ್.ಎಸ್ ಜಂಬಗಿ, ಸಿ.ಎಲ್ ಸಾಮನೆ ಉಪಸ್ಥಿತರಿದ್ದರು.
ಬಿ.ಇ.ಓ ಕಛೇರಿಯಲ್ಲಿ: ಡಾ. ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಬಿ.ಇ.ಓ ಎ.ಸಿ ಗಂಗಾಧರ, ಅಂಬೇಡ್ಕರ ಅವರ ಜೀವನ, ನಡೆದು ಬಂದ ದಾರಿ, ಶಿಕ್ಷಣ, ಸಂವಿದಾನ ರಚನೆಯಲ್ಲಿ ಅವರ ಪಾತ್ರದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಕಿಶೋರ ಮೊರೆ, ಎ.ಪಿ ಪರಸಣ್ಣವರ, ಟಿ ಕರಿಬಸವರಾಜು, ಸಸಾಲಟ್ಟಿ, ಜಗದಾಳ, ಗೋವಿಂದ ಸಣ್ಣಕ್ಕಿ, ಸಿ.ಬಿ ಪೂಜೇರಿ ಮತ್ತಿತರರು ಹಾಜರಿದ್ದರು.

Related posts: