RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ

ಗೋಕಾಕ:ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶನಿವಾರದಂದು ಅರಭಾವಿ ಮಂಡಲ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಮಾತನಾಡಿದರು.

ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ

ಗೋಕಾಕ ಎ 14 : ಅರಭಾವಿ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಎಲ್ಲ ಕಾರ್ಯಕರ್ತರು ದುಡಿಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಶನಿವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಹಗಲಿರುಳು ಶ್ರಮಿಸುವಂತೆ ಕೋರಿದರು.
ಕಳೆದ ಚುನಾವಣೆಯಲ್ಲಿ 75 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ 2ನೇ ಅತ್ಯಧಿಕ ಅಂತರದ ಗೆಲುವಿಗೆ ಕಾರಣರಾಗಿದ್ದೀರಿ. ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಕಳೆದ ಬಾರಿ 75 ಸಾ. ಈ ಬಾರಿ ಲಕ್ಷ ಮತಗಳ ಅಂತರದ ಜಯವೇ ಕಾರ್ಯಕರ್ತರ ಘೋಷವಾಕ್ಯವಾಗಬೇಕೆಂದು ತಿಳಿಸಿದರು.
ನನ್ನ ವಿರುದ್ಧ ಯಾರೇ ಸ್ಪರ್ಧಿಸಲಿ. ಅಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಚುನಾವಣೆ ಬಂದಾಗ ಮಾತ್ರ ಹತ್ತಿರವಾಗುತ್ತಿರುವವರಿಗೆ ಮತದಾರರು ತಕ್ಕಪಾಠ ಕಲಿಸಬೇಕು. ಕಳೆದ ಒಂದುವರೆ ದಶಕದಿಂದ ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಎಲ್ಲ ಸಮಾಜಗಳಿಗೆ ಗೌರವಾದರ ನೀಡುತ್ತಿದ್ದೇನೆ. ಈ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದೇನೆ. ಮುಂದೆಯೂ ಎಲ್ಲ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.
ಅರಭಾವಿ ಕ್ಷೇತ್ರದಂತಹ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಭಾಗ್ಯ. ಇಂತಹ ಕಾರ್ಯಕರ್ತರು ಎಲ್ಲಿಯೂ ಸಿಗುವುದಿಲ್ಲವೆಂದು ಹೇಳಿದರು. ಈಗಾಗಲೇ ಅರಭಾವಿ ಮತಕ್ಷೇತ್ರದ 74 ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಮೂಡಲಗಿ ಪಟ್ಟಣದಲ್ಲಿಯೇ ಶೇ 75ರಷ್ಟು ಮತಗಳನ್ನು ಪಡೆಯುತ್ತೇನೆ. ಉಳಿದ ಕಡೆ ಶೇ 90ರಷ್ಟು ಮತಗಳು ನಿಮ್ಮೆಲ್ಲರ ಪರಿಶ್ರಮದಿಂದ ದೊರಕಲಿವೆ. ಅರಭಾವಿ ಮತಕ್ಷೇತ್ರದ ದಾಖಲೆಯ ಗೆಲುವು ಸುವರ್ಣಾಕ್ಷರಗಳಿಂದ ಬರೆದಿಡಲು ಕಾರ್ಯಕರ್ತರು ಸಾಕ್ಷಿಕರಿಸಬೇಕೆಂದು ಹೇಳಿದರು.
ಹೊಸ ಇತಿಹಾಸ ಸೃಷ್ಟಿಸಲು ಕಾರ್ಯಕರ್ತರು ಈಗಿಂದಲೆ ಚುನಾವಣಾ ಪ್ರಚಾರ ನಡೆಸಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು. ಸುಭದ್ರ ಸರ್ಕಾರ ರಚನೆಗಾಗಿ ಬಿಜೆಪಿಯನ್ನು ಬೆಂಬಲಿಸಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಒಂದಾಗಿ ದುಡಿಯುವಂತೆ ಕೋರಿಕೊಂಡರು.
ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ನಿಂಗಪ್ಪ ಫಿರೋಜಿ, ವೀರಣ್ಣಾ ಹೊಸೂರ, ರಾವಸಾಬ ಬೆಳಕೂಡ, ಹಣಮಂತ ತೇರದಾಳ, ಅಶೋಕ ನಾಯಿಕ, ಅಶೋಕ ಪರುಶೆಟ್ಟಿ, ಪರ್ವತಗೌಡ ಪಾಟೀಲ, ಲಕ್ಷ್ಮಣ ಗಣಪ್ಪಗೋಳ, ರಾಜು ಬೈರುಗೋಳ, ಚಂದ್ರು ಬೆಳಗಲಿ, ಕೆಂಚಗೌಡ ಪಾಟೀಲ, ಸುಭಾಸ ಕುರಬೇಟ, ಪ್ರಕಾಶ ಹೆಗಡೆ, ಎಂ.ಆರ್. ಭೋವಿ, ಅಶೋಕ ಉದ್ದಪ್ಪನವರ, ಅಜ್ಜಪ್ಪ ಗಿರಡ್ಡಿ, ಎಲ್.ಎನ್. ಬೂದಿಗೊಪ್ಪ, ಬಿ.ಡಿ. ಪಾಟೀಲ, ರವಿ ಸೋನವಾಲ್ಕರ, ನಿಜಾಮಸಾಬ ಜಮಾದಾರ, ಶರೀಫ ಪಟೇಲ, ಲಕ್ಷ್ಮಣ ತೆಳಗಡೆ, ಪ್ರಕಾಶ ಮಾದರ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಲಕ್ಷ್ಮಣ ಮಸಗುಪ್ಪಿ, ಗಿರೀಶ ಹಳ್ಳೂರ, ಆನಂದರಾವ ನಾಯಿಕ, ರಮೇಶ ಮಾದರ, ರೇವಣ್ಣಾ ಕಣಕಿಕೋಡಿ, ಪರಸಪ್ಪ ಬಬಲಿ, ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಂಬೇಡ್ಕರ ಜಯಂತಿ ಆಚರಣೆ : ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 127ನೇ ಜಯಂತಿ ನಿಮಿತ್ಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

Related posts: