RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿ: ಸುರೇಶ ಪಾಟೀಲ

ಘಟಪ್ರಭಾ:ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿ: ಸುರೇಶ ಪಾಟೀಲ 

ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿ: ಸುರೇಶ ಪಾಟೀಲ

ಘಟಪ್ರಭಾ ಎ 15 : ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಬೇಕೆಂದು ಹಿರಿಯ ಕಾರ್ಯಕರ್ತರು ಹಾಗೂ ಗೋಕಾಕ ಮತಕ್ಷೆತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಸುರೇಶ ಪಾಟೀಲ ತಮ್ಮ ಅಕ್ರೋಶವನ್ನು ಹೊರಹಾಕಿದ್ದಾರೆ.
ಈ ಕುರಿತು ರವಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ 40 ವರ್ಷಗಳಿಂದ ಪಕ್ಷವು ವಹಿಸಿಕೊಟ್ಟ ಜವಾಬ್ದಾರಿಯನ್ನು ಚಾಚು ತಪ್ಪದೇ ಪಾಲಿಸುತ್ತ ಬಂದಿದ್ದೆನೆ. ಕಳೆದ ಮೂರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಭ್ಯರ್ಥಿ ಆಗಬಯಸಿ ಮನವಿ ಸಲ್ಲಿಸಿದ್ದರೂ ಯಾವ ರಾಜ್ಯ ನಾಯಕರಾಗಲಿ, ಜಿಲ್ಲಾ ನಾಯಕರಾಗಲಿ ಸ್ಫಂದಿಸಿಲ್ಲ. ಈ ಬಾರಿಯೂ ನಾನು ಗೋಕಾಕ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿ ಮನವಿ ಸಲ್ಲಿಸಿ ರಾಜ್ಯ ನಾಯಕರಿಗೆ ಬೆಟ್ಟಿಯಾಗಿ ಮನವಿ ಮಾಡಿಕೊಂಡರೂ ಮನ್ನಣೆ ದೊರತಿಲ್ಲ. ಪಕ್ಷದ ಕೆಲವು ನಾಯಕರು ವಲಸೆ ಬಂದಂತ ನಾಯಕರ ಜಾತಿ, ದುಡ್ಡು ಹಾಗೂ ಕಾರು ನೋಡಿ ಅಂತಹವರಿಗೆ ಮಣೆ ಹಾಕುತ್ತಿದ್ದಾರೆ. ಅಲ್ಲದೇ ಒಳ ಒಪ್ಪಂದ ಮಾಡಿಕೊಂಡು ಅಂತಹವರಿಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ ಶಾ ಅವರು ನಿಷ್ಠಾವಂತ ಹಾಗೂ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಟಿಕೇಟ್ ನೀಡಲು ತಿಳಿಸಿದರೂ ಸಹ ಕುತಂತ್ರಿಗಳು ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾರಣ ರಾಜ್ಯ ಅಧ್ಯಕ್ಷರು ಇತ್ತ ಗಮನ ಹರಿಸಿ ಕಾರ್ಯಕರ್ತರಿಗೆ ಅನ್ಯಾಯವಾಗುವದನ್ನು ತಪ್ಪಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ದೊರೆಯುವಂತೆ ಮಾಡಬೇಕು ಇಲ್ಲವಾದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಯಾವುದೆ ಭವಿಷ್ಯವಿಲ್ಲ ಎಂದು ಸುರೇಶ ಪಾಟೀಲ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts: