RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು: ಡಾ. ವೆಂಕಟೇಶ ರಾಯ್ಕರ

ಗೋಕಾಕ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು: ಡಾ. ವೆಂಕಟೇಶ ರಾಯ್ಕರ 

ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಒಂದು ದಿನದ ಅಂತರÀರಾಷ್ಟ್ರೀಯ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸುತ್ತಿರುವುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು: ಡಾ. ವೆಂಕಟೇಶ ರಾಯ್ಕರ

ಗೋಕಾಕ ಏ 16 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸುವದರೊಂದಿಗೆ ಭಾರತದ ಅಭಿವೃದ್ಧಿಗೆ ಶ್ರಮಿಸಿಬೇಕೆಂದು ಕೊಲ್ಹಾಪೂರದ ಸಂಜಯ ಘೋಡಾವತ್ ವಿಶ್ವವಿದ್ಯಾಲಯದ ಕುಲಪತಿ ಡಾ. ವೆಂಕಟೇಶ ರಾಯ್ಕರ ಹೇಳಿದರು.
ಅವರು ರವಿವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಒಂದು ದಿನದ ಅಂತರÀರಾಷ್ಟ್ರೀಯ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಲ್ಹಾಪೂರ ಶಿವಾಜಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡೀನರಾದ ಡಾ. ಎ. ಎಮ್. ಗುರವ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಮೂಹ ಚರ್ಚೆ ನಡೆಸಿ ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳುವದು ಇಂದು ಅನಿವಾರ್ಯವಾಗಿದೆ ಎಂದು ಹೇಳಿದರು.
ಟಿಬೇಟಿನ ಡ್ರಿಪಂಗ ಗಮಂಗ ಮೊನಶ್ಟರ ಕುಲಪತಿಗಳಾದ ಜೇಶೆ ಲೊಬಸಂಗ ಜ್ಯಲ್ಟಸೇನ(ಅಬ್ಬೋಟ)
ಇವರು ಮಾತನಾಡಿ ಇಂದಿನ ಜಾಗತೀಕರಣ ಸಂದರ್ಭದಲ್ಲಿ ಯುವಕರು ಉದ್ಯೋಗ ಕೌಶಲ್ಯದೊಂದಿಗೆ ಸ್ಪರ್ಧಾತ್ಮಕ ಮನೋಭಾವನೆ, ಬದ್ಧತೆ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕೆಂದು ಹೇಳಿದರು.
ಸಮ್ಮೇಳನದಲ್ಲಿ ವಿವಿಧ ದೇಶ ಹಾಗು ರಾಜ್ಯಗಳ ಮಹಾವಿದ್ಯಾಲಯಗಳಿಂದ 175 ಪ್ರತಿನಿಧಿಗಳು ಭಾಗವಹಿಸಿದ್ದು, 120 ಪ್ರತಿನಿಧಿಗಳು ಸಂಶೋಧಾನ್ಮಕ ಪ್ರಬಂಧಗಳನ್ನು ಮಂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೋಕಾಕ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಚೇರಮನ್ನ ಗಂಗಪ್ಪಣ್ಣಾ ತಾಂವಶಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದೇಶ-ವಿದೇಶಗಳ ಶಿಕ್ಷಣ ತಜ್ಞರ 137 ಪ್ರಪತ್ರಗಳ ಸಂಕಲನ ಇmಠಿಟoಥಿಚಿbiಟiಣಥಿ Sಞiಟಟs : ಖಿoಜಚಿಥಿs ಓeeಜ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಸಮ್ಮೇಳನದಲ್ಲಿ ಏಕಕಾಲಕ್ಕೆ 5 ಸಮಾನ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು, ಸದರಿ ಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ. ಆರ್. ಎಚ್. ಗುಣಕಿ, ಡಾ. ಎ. ವಾಯ್. ಪಂಗಣ್ಣವರ, ಪ್ರೊ. ಆರ್. ಜಿ. ಭರಭರಿ, ಪ್ರೊ. ಸಿ. ಬಿ. ಕೌಜಲಗಿ ಮತ್ತು ಡಾ. ಡಿ. ಎನ್. ಮಿಸಾಳೆ ವಹಿಸಿ ಉದ್ಯೋಗ ಕೌಶಲ್ಯಗಳ ಮಹತ್ವವನ್ನು ತಿಳಿಸಿದರು.
ಡಾ. ಯು. ಎಮ್. ಶಾಗೋಟಿ ಪ್ರಾಸ್ತಾವಿಕ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಆರ್. ಎಮ್. ಮಹೇಂದ್ರಕರ ವಂದಿಸಿದರು. ಡಾ. ಎ. ಎಸ್. ತೇರದಾಳ, ಪ್ರೊ. ಸುಷ್ಮಾ ಮ್ಯಾಥು ಮತ್ತು ಪ್ರೊ. ಎಮ್. ಎಮ್. ಕತ್ತಿ ಕಾರ್ಯಕ್ರಮ ನಿರೂಪಿಸಿದರು.

Related posts: