RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಶ್ರೀ ಭಗೀರಥ ಜಯಂತಿ ಆಚರಣೆ ಪೂರ್ವಭಾವಿ ಸಭೆ

ಗೋಕಾಕ:ಶ್ರೀ ಭಗೀರಥ ಜಯಂತಿ ಆಚರಣೆ ಪೂರ್ವಭಾವಿ ಸಭೆ 

ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಶ್ರೀ ಭಗೀರಥ ಜಯಂತಿ ನಿಮಿತ್ಯವಾಗಿ ತಾಲೂಕಾಡಳಿತ ಆಶ್ರಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಮುಖಂಡರು.

ಶ್ರೀ ಭಗೀರಥ ಜಯಂತಿ ಆಚರಣೆ ಪೂರ್ವಭಾವಿ ಸಭೆ

ಗೋಕಾಕ ಏ 17 : ಶ್ರೀ ಭಗೀರಥ ಜಯಂತಿ ಆಚರಣೆ ನಿಮಿತ್ಯವಾಗಿ ಮಂಗಳವಾರದಂದು ನಗರದ ಮಿನಿ ವಿಧಾನ ಸೌಧದ ತಹಶೀಲದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ ಆಶ್ರಯದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ-2 ತಹಶೀಲದಾರ ಎಸ್.ಕೆ.ಕುಲಕರ್ಣಿ ಅವರು ಮಾತನಾಡಿ ವಿಧಾನ ಸಭೆಯ ಚುನಾವಣೆಯ ಹಿನ್ನಲೆಯಲ್ಲಿ ಶ್ರೀ ಭಗೀರಥ ಮಹರ್ಷಿಗಳು ಜಯಂತಿಯನ್ನು ತಾಲೂಕಾಡಳಿತದಿಂದ ದಿ. 22 ರಂದು ಮುಂಜಾನೆ 10 ಗಂಟೆಗೆ ಸರಳವಾಗಿ ಪೂಜೆಯನ್ನು ನೆರವೇರಿಸುವ ಮೂಲಕ ಆಚರಿಸಲಾಗುವುದು. ಸರಿಯಾದ ಸಮಯಕ್ಕೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಾದ ಎಮ್.ಎಚ್.ಅತ್ತಾರ, ಆರ್.ಕೆ.ಬಿಸಿರೊಟ್ಟಿ, ವಿಜಯಕುಮಾರ ಸೂಲೆಗಾಂವಿ, ಮಂಜುನಾಥ ಉಪ್ಪಾರ, ಮುಖಂಡರಾದ ಅಡಿವೆಪ್ಪ ಕಿತ್ತೂರ, ಎಮ್.ಎಚ್.ಹತ್ತಿಕಟಗಿ, ಆರ್.ವಾಯ್.ತೋಳಿ, ಎಲ್.ಎನ್.ಬೂದಿಗೊಪ್ಪ, ಕುಶಾಲ ಗುಡೆನ್ನವರ, ಶಂಕರ ಧರೆನ್ನವರ, ವಾಯ್.ಎಲ್.ದುರದುಂಡಿ, ಶಿವು ಕುಡ್ಡೆಮ್ಮಿ, ಸಂಜು ಹಿರಟ್ಟಿ ಸೇರಿದಂತೆ ಅನೇಕರು ಇದ್ದರು

.

Related posts: