ಗೋಕಾಕ:ಸಿದ್ದು ವಾಡೆನ್ನವರ ಬರೆದ ಕರ್ನಾಟಕ ಪಾಲಿಟಿಕ್ಸ್ ಪುಸ್ತಕದ ಭರ್ಜರಿ ಮಾರಾಟ..!
ಸಿದ್ದು ವಾಡೆನ್ನವರ ಬರೆದ ಕರ್ನಾಟಕ ಪಾಲಿಟಿಕ್ಸ್ ಪುಸ್ತಕದ ಭರ್ಜರಿ ಮಾರಾಟ..!
ಗೋಕಾಕ ಏ 17 : ಮುಂಬರುವ ಇದೇ 2018 ರ ಮೇ 12 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿರು ಬಿಸಿಲಿನ ಝಳಕ್ಕಿಂತ ಇದೇ ಎಪ್ರೀಲ್ 17 ರಿಂದ ಚುನಾವಣೆ ಕಾವು ಮತ್ತಷ್ಟು ರಂಗೇರುತ್ತಿರುವ ಜೊತೆಗೆ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾವಿ ನಾಡಿನ ರೈತರ ಜೀವನಾಡಿ ಸತೀಶ ಶುಗರ್ಸ್ ಪ್ರಾ.ಲಿ., ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ಅವರು ಬರೆದ ಕರ್ನಾಟಕ ಪಾಲಿಟಿಕ್ಸ್ ಪುಸ್ತಕ ಭರ್ಜರಿ ಮಾರಾಟದ ಸದ್ದು ಮಾಡುತ್ತಿದೆ. ಕಳೆದ ತಿಂಗಳಷ್ಟೆ ಬಿಡುಗಡೆಗೊಂಡ ಈ ಪುಸ್ತಕವನ್ನು ಸಾಕಷ್ಟು ಜನ ಓದುಗರು ಖರೀದಿಸುತ್ತಿದ್ದಾರೆ. ಅಲ್ಲದೇ ಆನ್‍ಲೈನ ಮೂಲಕ ಪುಸ್ತಕದ ಬೇಡಿಕೆ ಮತ್ತು ವ್ಯಾಪಾರದ ಭಾರಿ ಸದ್ದು ಮಾಡುತ್ತಿದೆ.
ಪುಸ್ತಕ ಪುಟದೊಳಗೆ ಏನೇನಿದೆ
ಕರುನಾಡಿನ ಒಟ್ಟು 224 ವಿಧಾನಸಭೆ ಮತಕ್ಷೇತ್ರಗಳ ಸಮಗ್ರ ಮಾಹಿತಿ ಕಳೆದೊಂದು ದಶಕ ಕಾಲ ಪತ್ರಿಕಾ ಮತ್ತು ಪ್ರಸಾರ ಮಾಧ್ಯಮ ಮಾಡಿದ ವಿಶ್ಲೇಷಣೆಗಳು, ಖಾಸಗಿ ಸಂಸ್ಥೆಗಳು ಕೈಗೊಂಡ ಅಧ್ಯಯನದ ಮಾಹಿತಿ, ತುರುಸಿನ ಸ್ಪರ್ಧಾ ಮತಕ್ಷೇತ್ರಗಳು, ನೇರಾನೇರ ಸ್ಫರ್ಧೆಯೊಡ್ಡುವ ಅಭ್ಯರ್ಥಿಗಳ ಕ್ಷೇತ್ರಗಳು, ತ್ರಿಕೋನ ಆಖಾಡದ ಮತಕ್ಷೇತ್ರಗಳು, ರಾಜ್ಯದಲ್ಲಿ ಪ್ರಭಾವಿನಾಯಕರೆಂದು ಗುರುತಿಸಿಕೊಂಡಿರುವ ಕೆಲವು ಕ್ಷೇತ್ರಗಳು ಸೇರಿದಂತೆ ಪ್ರಸ್ತುತ ರಾಜಕೀಯ ಎಲ್ಲಾ ವಿದ್ಯಮಾನಗಳನೊಳಗೊಂಡ ಸಮಗ್ರ ಮಾಹಿತಿ ಕ್ರೂಢೀಕರಿಸಿ ನಾಡಿನ ಸಾಮಾನ್ಯ ಓದುಗನಿಗೆ ತಿಳಿಯುವಂತೆ ಈ ಪುಸ್ತಕದಲ್ಲಿ ಸಿದ್ದು ವಾಡೆನ್ನವರ ವಿಶ್ಲೇಷಾತ್ಮಕ ವಿವರ ಬರೆದಿದ್ದಾರೆ.
ಪ್ರಥಮ ಪುಸ್ತಕ : ಔದ್ಯೋಗಿಕ ವಲಯದ ಸಕ್ಕರೆ
ಕಾರ್ಖಾನೆಗಳನ್ನು ಪ್ರಗತಿಕಂಪು ಸೂಸುವಂತೆ ಮುನ್ನಡಿಸಿಕೊಂಡು ಬರುತ್ತಿರುವ ವಾಡೆನ್ನವರ ತಮ್ಮ ಸೂಕ್ತ ಪ್ರತಿಭೆಯ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿರುವ ಅವರು ಒಂದು ದಶಕಗಳ ಕಾಲ ಹಗಲಿರುಳು ಪರಿಶ್ರಮಪಟ್ಟು ಪ್ರಚಲಿತ ರಾಜಕೀಯ ವಿಷಯಗಳನ್ನು ಕರ್ನಾಟಕ ಪಾಲಿಟಿಕ್ಸ್ ಪುಸ್ತಕ ಹೊರತಂದು ಕನ್ನಡ ಸಾರಸ್ಯತ್ವ ಲೋಕದಲ್ಲಿ ಪ್ರಥಮ ಬಾರಿಗೆ ತಮ್ಮ ಜ್ಞಾನಾಮೃತದ ಸವಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರಪ್ರಥಮ ಲೇಖನಿಯ ಹೆಜ್ಜೆಯೆನಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ವಿವಿಧ ವಲಯದ ಸಾಕಷ್ಟು ವಿಷಯವಸ್ತು ಸಂಗ್ರಹಿಸಿ ಹಲವಾರು ಪುಸ್ತಕಗಳನ್ನು ಓದುಗ ದೊರೆಗಳ ಕೈಗಿಡುವ ಆಸಕ್ತಿ ತೋರಿದ್ದಾರೆ.
ಸಿದ್ದು ಅವರು ಕನ್ನಡ ಸಾಹಿತ್ಯ ಓದಿಕೊಂಡಿಲ್ಲವಾದರೂ ಕನ್ನಡಾಭಿಮಾನ, ನಾಡಿನ ಕಲೆ, ಸಂಸ್ಕøತಿ, ಸಂಪ್ರದಾಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಹೀಗೆ ನಾಡಿನ ಹಲವು ವಲಯದಲ್ಲಿ ಜನಜೀವನದ ಕುರಿತು ಆಚಾರ-ವಿಚಾರಗಳನ್ನು ಅರಿತುಕೊಂಡು ಅವರು ಏನಾದರೂ ಕೊಡುಗೆಯಾಗಿ ನೀಡಬೇಕೆಂಬ ಸದುದ್ದೇಶದಿಂದ ಹವ್ಯಾಸಿ ಬರಹಗಾರರಾಗಿ ಪುಸ್ತಕ ಬರೆಯಲು ಆರಂಭಿಸಿ ಕರ್ನಾಟಕ ಪಾಲಿಟಿಕ್ಸ್ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.