RNI NO. KARKAN/2006/27779|Sunday, December 22, 2024
You are here: Home » breaking news » ಘಟಪ್ರಭಾ: ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ

ಘಟಪ್ರಭಾ: ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ 

ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ

ಘಟಪ್ರಭಾ ಮೇ 24: ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಕರ್ನಾಟಕವನ್ನು ಅವಮಾನಿಸಿರುವ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿ.ಪಂ ಸದಸ್ಯೆ ಸರಸ್ವತಿ ಪಾಟೀಲ್ ಅವರ ಸದಸ್ಯತ್ವವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು

ಬುಧವಾರ ಇಲ್ಲಿಯ ಮೃತುಂಜಯ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ನಾಡದ್ರೋಹಿ ಎಂಇಎಸ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವೀ ಅರ್ಪಿಸಿದರು

ಈ ಕೂಡಲೇ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸದ್ದಿದರೆ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ
ಈ ಸಂರ್ಧಭದಲ್ಲಿ ವೇದಿಕೆಯ ಜಿಲ್ಲಾದ್ಯಕ್ಷ ವಿರಣ್ಣ ಸಂಗಮನವರ , ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: