RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಬಡಕುಟುಂಬಕ್ಕೆ ಆಸರೆಯಾದ ಜೋಡಿ ಪುಟ್ಟಹೋರಿಕರುಗಳು..!

ಗೋಕಾಕ:ಬಡಕುಟುಂಬಕ್ಕೆ ಆಸರೆಯಾದ ಜೋಡಿ ಪುಟ್ಟಹೋರಿಕರುಗಳು..! 

ಗ್ರಾಮದ ರೈತ ಬಸಪ್ಪ ಬಿಳ್ಯಾಡಿ ಅವರ ಪುಟ್ಟಪೂರರು ಚಿಕ್ಕಹೋರಿಗಳಿಂದ ಸಣ್ಣದಾದ ಬಂಡಿ ಹೋಡಿಕೊಂಡು ತೋಟದ ಮನೆಯಿಂದ ಊರಿನಲ್ಲಿರುವ ಬೀಸುವ ಗಿರಣಿಗೆ ಕಾಳುಕಡಿ ತಂದು ಬೀಸಿಕೊಂಡು ಹೋಗುವದಕ್ಕೆ ಬರುತ್ತಿರುವದು.

ಬಡಕುಟುಂಬಕ್ಕೆ ಆಸರೆಯಾದ ಜೋಡಿ ಪುಟ್ಟಹೋರಿಕರುಗಳು..!
ವಿಶೇಷ ವರದಿ : ಅಡಿವೇಶ ಮುಧೋಳ
ಬೆಟಗೇರಿ ಏ 19 : ಪುಟಾಣಿ ಮಕ್ಕಳು ಚಿಕ್ಕ ಬಂಡಿ ಹೂಡಿರುವದು… ಪುಟ್ಟಹೋರಿ ಕರುಗಳು ಬಂಡಿಯ ನೊಗಕ್ಕೆ ಹೆಗಲಕೊಟ್ಟು ನಡೆಯುವದು… ಮಕ್ಕಳು ಹೋರಿಕರುಗಳ ಆಕಡೆ…ಈಕಡೆ..ನಡೆಯುತ್ತಾ ಬರುವ ದೃಶ್ಯ ಎಂತಹವರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಎಲ್ಲಿ ಅನ್ನುತ್ತೀರಾ.? ಇದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪುಟಾಣಿ ಮಕ್ಕಳು ತಮ್ಮ ಕುಟುಂಬದ ಬದುಕಿನ ನಿರ್ವಹಣೆಗಾಗಿ ಬಂಡಿ ಹೋಡಿಕೊಂಡು ಮಾಡುವ ನಿತ್ಯದ ಕಾಯಕದ ನೋಟವಿದು.!
ಗ್ರಾಮದ ಬಸಪ್ಪ ಬಿಳ್ಯಾಡಿ ಅವರ ಬಡಕುಟುಂಬ ಜೋಡಿ ಹೋರಿಕರುಗಳ ಆಸರೆಯಿಂದ ಹಲವಾರು ಸಣ್ಣ ಕೆಲಸಗಳನ್ನು ಪೂರೈಸಿಕೊಂಡು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದೆ. ಚಿಕ್ಕ ಮಕ್ಕಳಿದ್ದರೂ ಕೂಡಾ ಜೋಡಿ ಹೋರಿಕರುಗಳ ಚಿಕ್ಕ ಬಂಡಿ ಹೊಡಿಕೊಂಡು ನಿತ್ಯ ಮನೆಯಿಂದ ತುಸುದೂರದ ಹೊಲ,ಗದ್ದೆಗಳಿಂದ ಮೇವು ತರುವುದು, ತೋಟದ ಮನೆಯಲ್ಲಿ ವಾಸವಾಗಿರುವ ಈ ಕುಟುಂಬ ಊರಿನಲ್ಲಿರುವ ಬೀಸುವ ಗಿರಣಿಗೆ ಕಾಳುಕಡಿ ತಂದು ಬೀಸಿಕೊಂಡು ಹೋಗುವದನ್ನು ನೋಡಿದರೆ ಈ ಮಕ್ಕಳ ಸಾಹಸ ಮೆಚ್ಚುವಂತದಾಗಿದೆ.
ಇಂದಿನ ಯುಗದಲ್ಲಿ ಯಂತ್ರೂಪಕರಣಗಳ ಸಾಧನ ಸಲಕರಣೆಗಳ ಸಹಾಯದಿಂದ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಈಗ ಜಾನುವಾರುಗಳ ಸಹಾಯವನ್ನೇ ಮರೆತಂತೆ ಕಾಣುತ್ತಿರುವ ಕಾಲದಲ್ಲಿ ಇಲ್ಲಿಯ ಈ ಕುಟುಂಬ ಜಾನುವಾರಗಳನ್ನೇ ಅವಲಂಬಿಸಿ ಕೃಷಿ ಚಟುವಟಿಕೆ ಮಾಡುತ್ತಾ ತಮ್ಮ ಮಕ್ಕಳಿಗೂ ಸಹ ಶಾಲೆಯ ರಜೆ ದಿನಗಳಲ್ಲಿ, ಶಾಲಾವಧಿಯ ಬಿಡುವಿನ ಅವಧಿಯಲ್ಲಿ ಬಂಡಿ ಹೊಡುವ, ನೇಗಿಲು ನೊಗ ಕಟ್ಟುವ, ಮತ್ತೀತರ ಕೃಷಿ ಚಟುವಟಿಕೆಗಳನ್ನು ಕಲಿಸುತ್ತಿರುವದು ಕಾಯಕ ಶ್ಲಾಘಿನೀಯವಾಗಿದೆ.
ತೋಟದಲ್ಲಿರುವುದರಿಂದ ಸ್ವಲ್ಪ ದೂರದ ಗದ್ದೆಯಿಂದ ಮೇವು ತರುವುದು, ಊರಾಗ ಹೋಗಿ ಬೀಸಕೊಂಡು ಬರುವುದು ಮಕ್ಕಳು ಮಾಡುತ್ತಾರೆ. ಅವರಿಗೆ ಜೋತೆಯಾಗಿ ಹೋರಿಕರುಗಳು ರೂಢಿಯಾಗಿವೆ. ಊರಾಗ ಬರುವಾಗ ಮಾತ್ರ ನಾನು ಬಂಡಿ ಜೋತೆಗೆ ಬರುತ್ತೇನೆ ನಮಗೆ ಈ ಮಕ್ಕಳು, ಸಣ್ಣಹೋರಿಗಳು ಸಣ್ಣ ಸಣ್ಣ ಕೆಲಸಕ್ಕೆ ಆಸರೆಯಾಗಿವೆ ಎಂದು ಸ್ಥಳೀಯ ಬಡ ರೈತಜೀವಿ ಬಸಪ್ಪ ಬಿಳ್ಯಾಡಿ ಹೇಳುವ ಮಾತು.

Related posts: