RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ:ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ

ಬೆಳಗಾವಿ:ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ 

ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ
ಬೆಳಗಾವಿ ಏ 20 : ಕಳೆದ ಮೂರನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದ ಮಾಜಿ ಶಾಸಕ ಅಭಯ ಪಾಟೀಲ ಸದ್ದಿಲದೆ ಬಿ ಪಾರಂ ತಂದು ಶುಕ್ರವಾರದಂದು ಬಿಜೆಪಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌‌‌ಗಾಗಿ ಐದಕ್ಕೂ ಅಧಿಕ ಆಕಾಂಕ್ಷಿಗಳ ನಡುವೆ ಪೈಪೋಟಿ ಇತ್ತು. ಈ ಐವರಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಅಭಯ ಪಾಟೀಲ್ ಅವರಿಗೆ ಬಿಜೆಪಿಯ ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ.

ಮೂರನೇ ಪಟ್ಟಿ ಬಿಡುಗಡೆಗೂ ಮುನ್ನವೇ ಅಭಯ ಪಾಟೀಲ್ ಬಿ ಫಾರಂ ತಂದಿದ್ದು, ಇಂದು‌ ಚುನಾವಣಾಧಿಕಾರಿ ಕೃಷ್ಟಗೌಡ ತಾಯಣ್ಣವರ ಅವರಿಗೆ ನಾಮಪತ್ರ ಸಲ್ಲಿಸಿದರು. ಕೇವಲ ಐವರು ಕಾರ್ಯಕರ್ತರು ಮಾತ್ರ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು. ಮೆರವಣಿಗೆ ಇಲ್ಲದೇ ತಮ್ಮ ಕಾರಿನಲ್ಲಿ ಬಂದು ಸರಳವಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

Related posts: