RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ: ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ: ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ 

ಬಾಲಕಿಯ ಮೇಲೆ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ
ಗೋಕಾಕ ಏ 21 : ಜಮ್ಮು ಕಾಶ್ಮೀರದ ಕಟುವಾ ಗ್ರಾಮದಲ್ಲಿ ಅಪ್ರಾತ್ತ 8 ವರ್ಷದ ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ವೆಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಶನಿವಾರದಂದು ಸಾರ್ವಜನಿಕರು ಪ್ರತಿಭಟನೆ ನಡೆಯಿಸಿದರು

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಮುಸ್ಲಿಂ ಸಮುದಾಯದ ಯುವಕರು ಜಮ್ಮು ಕಾಶ್ಮೀರದ ಆಸೀಪಾ , ಬಿಜಾಪುರದ ದಾನಮ್ಮಾ , ಉತ್ತರ ಪ್ರದೇಶದ ಉನ್ನಾವ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ವೆಸಿಗಿ ಕೊಲೆಗೈದ ಕೊಲೆಗಡುಕರನ್ನು ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮಿನಿ ವಿಧಾನಸೌದ ವರೆಗೆ ಪ್ರತಿಭಟನಾ ಮೆರವಣಿಗೆ ಪಡೆಯಿಸಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು .
ಪ್ರತಿಭಟನೆಯಲ್ಲಿ ಅಜರ ಮುಜಾವರ , ಸದ್ದಾಂ ಸೌದಾಗರ , ಹಾರುನ ಮತ್ತೆ , ಶಾಹೀದ ಮತ್ತೆ , ಹಮೀದ ಗುಡವಾಲೆ , ಯೂನೂಸ ಫನಿಬಂಧ , ರಿಯಾಜ ಕಲ್ಲೋಳಿ , ಯಾಸೀನ ಜಮಾದಾರ , ಯೂನೂಸ ಸೈಯದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: