RNI NO. KARKAN/2006/27779|Monday, December 23, 2024
You are here: Home » breaking news » ಬೆಳಗಾವಿ:ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ

ಬೆಳಗಾವಿ:ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ 

ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ

ಬೆಳಗಾವಿ ಏ 21 : ಕಳೆದ 25 ವರ್ಷಗಳಿಂದ ಗೋಕಾದಲ್ಲಿ ಹಣ ಮತ್ತು ತೋಳ್ಬಲ ದಿಂದ ಚುನಾವಣೆ ನಡೆಯುತ್ತಿದೆ ಹೀಗಾಗಿ ಈ ಬಾರಿ ಚುನಾವಣೆಗೆ ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೋಳುವಂತೆ ಆಗ್ರಹಿಸಿ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ನೇತೃತ್ವದಲ್ಲಿ ಶನಿವಾರದಂದು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು .

ಗೋಕಾಕ ಕ್ಷೇತ್ರದ ಎಲ್ಲ 283 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಿ, ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕು. ಚುನಾವಣೆ ಪ್ರಕ್ರಿಯೆಯನ್ನು ಚಿತ್ರೀಕರಿಸಲು ವೆಬ್ ಕ್ಯಾಮರಾ ಅಳವಡಿಸಬೇಕು. ಕಳೆದ ಹಲವು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ, ಪೊಲೀಸ್ ಮತ್ತು ಇತರ ಇಲಾಖೆ ಸಿಬ್ಬಂದಿಯನ್ನು‌ ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು ಎಂದಿದ್ದಾರೆ. 

ಪೊಲೀಂಗ್ ಏಜೆಂಟರ್‌‌ಗಳಾಗಿ ಗೋಕಾಕ್‌ ಕ್ಷೇತ್ರದ ಜನರನ್ನು‌ ನೇಮಿಸಬೇಕು, ಹಣ-ತೋಳ್ಬಲ ನಿಯಂತ್ರಿಸಬೇಕು. ಗೋಕಾಕ ಕ್ಷೇತ್ರಕ್ಕೆ ದಕ್ಷ ಮತ್ತು ಪ್ರಾಮಾಣಿಕ ಹೆಚ್ಚು ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಲಾಯಿತು

Related posts: