RNI NO. KARKAN/2006/27779|Friday, December 13, 2024
You are here: Home » breaking news » ಚಿಕ್ಕೋಡಿ:ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಜಯಗಳಿಸಲಿದೆ : ಸಚಿವ ರಮೇಶ ವಿಸ್ವಾಸ

ಚಿಕ್ಕೋಡಿ:ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಜಯಗಳಿಸಲಿದೆ : ಸಚಿವ ರಮೇಶ ವಿಸ್ವಾಸ 

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಜಯಗಳಿಸಲಿದೆ : ಸಚಿವ ರಮೇಶ ವಿಸ್ವಾಸ

ಚಿಕ್ಕೋಡಿ ಏ 22 : ಜಿಲ್ಲೆಯ ಕಾಂಗ್ರೇಸ ಕಾರ್ಯಕರ್ತರ ಬಿನ್ನಾಬಿಪ್ರಾಯವನ್ನು ಬಗೆಹರಿಸಲಾಗುವುದು . ಈ ಕುರಿತು ಶೀಘ್ರದಲ್ಲೇ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ

ತಾಲೂಕಿನ ಕರೋಶಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ 12 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂದರು. 

ಸಿಎಂ ಸಿದ್ದರಾಮಯ್ಯನವರು ಕಳೆದ 5 ವರ್ಷಗಳಲ್ಲಿ  ಜನಪರ ಕೆಲಸ ಮಾಡಿದ್ದಾರೆ. ಈ ಎಲ್ಲಾ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮೀಸಲು‌ ಕ್ಷೇತ್ರವಾದ ರಾಯಬಾಗ ಕ್ಷೇತ್ರದಲ್ಲಿ ಬಂಡಾಯವನ್ನು ಶಮನಗೊಳಿಸಿ ಪ್ರದೀಪ್‌ ಕುಮಾರ ‌ಮಾಳಗೆಯವರನ್ನು ಜನರು ಆಯ್ಕೆ ಮಾಡಲಿದ್ದಾರೆ ಎಂದರು.  

ಇದೇ ಸಂದರ್ಭದಲ್ಲಿ ಸ್ಥಳೀಯ ನಾಗರಮುನ್ನೂಳ್ಳಿ ‌ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಪಾಟೀಲ ಅವರ  ಮನೆಗೆ ದಿಢೀರ್ ಭೇಟಿ ನೀಡಿ, ವೈಮನಸ್ಸು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವೊಲಿಸಿದರು.

Related posts: