ಗೋಕಾಕ:ಕ್ಲೈಮ್ಯಾಕ್ಸ್ ಡೇ ದಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಶೋಕ ಪೂಜಾರಿ
ಕ್ಲೈಮ್ಯಾಕ್ಸ್ ಡೇ ದಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಶೋಕ ಪೂಜಾರಿ
ಗೋಕಾಕ ಏ 24 : ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ಧು , ಗೋಕಾಕ ಮತ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು ತಮ್ಮ ಅಫಾರ ಬೆಂಬಲಿಗರೊಂದಿಗೆ ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು .
ನಗರದ ತಮ್ಮ ನಿವಾಸದಿಂದ ಬೆಂಬಲಿಗರೊಂದಿಗೆ ಮೆರವಣಿಗೆ ಮುಖಾಂತರ ತಾಲೂಕಾ ದಂಡಾಧಿಕಾರಿಗಳ ಕಛೇರಿಗೆ ಆಗಮಿಸಿದ ಪೂಜಾರಿ ಚುನಾವಣಾಧಿಕಾರಿ ಶ್ರೀ ದಿನೇಶಕುಮಾರ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು .
ನಾಮಪತ್ರ ಸಲ್ಲಿಸುವ ಮೊದಲು ಸುದ್ದಿಗಾರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ಬಾರಿ ಬಿಜೆಪಿಗೆ ಜನ ಬೆಃಬಲ ನಿಡಲ್ಲಿದ್ದಾರೆ . ಗೋಕಾಕ ಮತಕ್ಷೇತ್ರದಲ್ಲಿ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವಂತೆ ಈಗಾಗಲೇ ಕೇಂದ್ರ ಚುನಾವಣೆ ಆಯೋಗಕ್ಕೆ , ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ನಿಡಲಾಗಿದೆ . ಎರೆಡಮೂರು ಅವಧಿಗೆ ಈ ಭಾಗದಲ್ಲಿ ಚುನಾವಣಾ ಅಕ್ರಮ ನಡೆದಂತೆ ಈ ಸಾರಿ ನಡೆಯಲು ಬಿಡುವುದಿಲ್ಲ ನ್ಯಾಯಸಮ್ಮತ ಚುನಾವಣೆ ನಡೆದರೆ ನೂರಕ್ಕೆ ನೂರರಷ್ಟು ಬಿಜೆಪಿ ಪಕ್ಷ ಜಯಭೇರಿ ಭಾರಿಸುವುದನ್ನು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು
ಈ ಸಂದರ್ಭದಲ್ಲಿ ಬೆಳಗಾವಿ ಸಂಸಂದ ಸುರೇಶ ಅಂಗಡಿ , ಈರಣ್ಣ ಕಡಾಡಿ , ಮಾಜಿ ಶಾಸಕ ಎಂ.ಎಲ್. ಮುತ್ತೇನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು