RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ :ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ

ಗೋಕಾಕ :ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ 

ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ

ಗೋಕಾಕ ಏ 24 : ವಿಧಾನಸಭಾ ಚುನಾವಣೆಗೆ ಇಂದು ಕ್ಲೈಮ್ಯಾಕ್ಸ್ ದಿನವಾದ ಇಂದು ವಿವಿಧ ಪಕ್ಷದ ಮುಖಂಡರು ಸಾಲು ಸಾಲಿಗಿ ತಮ್ಮ ನಾಮಪತ್ರವನ್ನು ಸಲ್ಲಿಸಿ ಚುನಾವಣಾ ಕಣವನ್ನು ರಂಗೇರಿಸಿದರು .

ಗೋಕಾಕ ಮತ್ತು ಅರಬಾಂವಿ ಮತ ಕ್ಷೇತ್ರದ ಬಿಜೆಪಿ ಹುರಿಯಾಳುಗಳಾದ ಶಾಸಕ ಬಾಲಚಂದ್ರ ಮತ್ತು ಗೋಕಾಕ ಕ್ಷೇತ್ರದ ಅಶೋಕ ಪೂಜಾರಿ ಸಲ್ಲಿಸಿದ ಪ್ರಮುಖರು . ಇನ್ನು ಗೋಕಾಕ ಮತಕ್ಷೇತ್ರದಿಂದ ಎಂಇಪಿ ಪಕ್ಷದಿಂದ ಗೋಕಾಕ ಕ್ಷೇತ್ರದ ಅಭ್ಯರ್ಥಿಯಾಗಿ ಪರವಿಣ ತಾಂಬೂಳೆ , ಜೆಡಿಎಸ್ ದಿಂದ ಕೆ.ಎಲ್ ತಳವಾರ, ಪಕ್ಷೇತರವಾಗಿ ಸುರೇಶ ಪಾಟೀಲ್ ಮತ್ತು ಅರಬಾಂವಿ ಮತಕ್ಷೇತ್ರದಿಂದ ಪಕ್ಷೇತರವಾಗಿ ಶಂಕರಗೌಡಾ ಪಡತಾರೆ , ಅಶೋಕ ಹನಚ್ಚಿ , ಜೆಡಿಎಸ್ ದಿಂದ ಪ್ರಕಾಶ ಸೋನವಾಲ್ಕರ , ಭಾರತೀಯ ಜನ ಶಕ್ತಿ ಕಾಂಗೇಸದಿಂದ ಚಂದ್ರಶೇಖರ ಪರುಶೇಟ್ಟಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು

Related posts: