ಮೂಡಲಗಿ:ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ
ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ
ಮೂಡಲಗಿ ಏ 26 : ಅರಭಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ ಮತ್ತೊಮ್ಮ ಜನಸೇವೆಗೆ ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ಗುರುವಾರದಂದು ಕ್ಷೇತ್ರದ ಹೊನಕುಪ್ಪಿ, ಲಕ್ಷ್ಮೇಶ್ವರ, ಸುಣಧೋಳಿ, ತಿಗಡಿ, ಮಸಗುಪ್ಪಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. ಕ್ಷೇತ್ರದ ಜನರ ಕಷ್ಠ ಕಾರ್ಪಣ್ಯಗಳನ್ನು ಎಂದೂ ಅರಿಯದ ಕೆಲ ವಿರೋಧಿಗಳು ಚುನಾವಣೆಗೊಮ್ಮೆ ಬಂದು ಜನರಿಗೆ ಮುಖ ತೋರಿಸುತ್ತಾರೆ. ಬಣ್ಣದ ಮಾತುಗಳನ್ನು ಆಡಿ ಜನರನ್ನು ಧಿಕ್ಕು ತಪ್ಪಿಸುತ್ತಿದ್ದಾರೆ ಇಂತವರ ಮಾತುಗಳಿಗೆ ಮರುಳಾಗದೆ ನನ್ನನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಕೋರಿದರು.
ಕುಲಗೋಡ ಟೆಲೆಂಡ ಭಾಗದ ರೈತರ ಜಮಿನುಗಳಿಗೆ ಈಗಾಗಲೇ ಕೊಟ್ಟ ಮಾತಿನಂತೆ ನೀರು ಹರಿಸಲಾಗಿದೆ. ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವ ಸಂದರ್ಭದಲ್ಲಿ ಕುಲಗೋಡ ವಿತರಣಾ ಕಾಲುವೆಯ ಟೆಲೆಂಡ ರೈತರಿಗೆ ನೀರು ತಲುಪಿದೆ. ಮುಂದೆಯು ಸಹ ಕುಲಗೋಡ, ಹೊನಕುಪ್ಪಿ, ಲಕ್ಷ್ಮೇಶ್ವರ, ಸುಣಧೋಳಿ, ಭೈರನಟ್ಟಿ, ಹೊಸಟ್ಟಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಕೇಂದ್ರದಲ್ಲಿ ಈಗಾಗಲೇ ಬಿಜೆಪಿ ಸರಕಾರ ಅಸ್ಥಿತ್ವದಲ್ಲಿರುವದರಿಂದ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಲಿದೆ.
ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಶರವೇಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾಣಕ್ಕೆ ಬರಲಿವೆ.
ಅದರಲ್ಲೂ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯ ಮಂತ್ರಿಯಾದರೆ ಉತ್ತರ ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲಿದ್ದಾರೆ. ಅದರಲ್ಲೂ ಅರಭಾಂವಿ ಕ್ಷೇತ್ರದಲ್ಲಿ ನೀರಾವರಿ ಹೊಸ ಯೋಜನೆಗಳು ಜಾರಿಯಾಗಲಿವೆ. ಸ್ಥಿರ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿಯನ್ನು ಹರಿಸುವಂತೆ ಮನವಿ ಮಾಡಿಕೊಂಡರು. ಕಳೆದ 14 ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೋಳ್ಳಲಾಗಿದೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸಲ್ಲಾಗಿದೆ. ಆಯಾ ಸಮಾಜಗಳ ಹಿತದೃಷ್ಠಿಯಿಂದ ಸಮಾಜ ಮುಖಿ ಕಾರ್ಯಗಳನ್ನು ಮಾಡಲ್ಲಾಗಿದೆ ಎಂದರು.
ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಜಿ.ಪಂಸದಸ್ಯ ಗೋವಿಂದ ಕೊಪ್ಪದ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅಪಯ್ಯ ಬಡಿಂಗಗೋಳ, ಎಸ್.ಆರ್.ಬೋವಿ, ಎಪಿಎಮ್ ಸಿ ನಿರ್ಧೇಶಕ ರೇವಣ್ಣ ಕಣಕಿಕೋಡಿ, ಸುಣಧೋಳಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಸಿದ್ದಾಪೂರ, ಬಸು ಗಂಗರಡ್ಡಿ, ಶಿವಲಿಂಗಪ್ಪ ಮದಬಾಂವಿ, ಕಲ್ಲಪ್ಪ ಕಮತಿ, ಗುರುರಾಜ ಪಾಟೀಲ, ಮುರಗೇಪ್ಪ ಪಾಟೀಲ, ಭೀಮಶಿ ಕಮತಿ, ಯಲ್ಲಪ್ಪ ಆಲಕನ್ನೂರ, ಶಶಿಕಾಂತ ಬೆಣ್ಣಿ, ಸಿದಾರೂಢ ಕಮತಿ, ಮಹಾದೇವ ಹಾರುಗೇರಿ, ಮಕ್ತಮುಸಾಬ ಮೋಮಿನ, ಸಂಜು ಗಡಗಿ, ಬಸು ಖಿಲಾರಿ. ಹನುಮಂತ ಹೆಗಡೆ, ಸುರೇಶ ಸಣ್ಣಕ್ಕಿ, ಪ್ರಕಾಶ ಪತ್ತಾರ, ವಾಯ್ ಆರ್.ಪಾಟೀಲ್, ಹನಮಂತ ಅಂಬಿ, ಅಶೋಕ ಪೂಜೆರಿ, ಸಿದ್ರಾಯ ಬಿರಡ್ಡಿ, ಕಲ್ಲಪ್ಪ ಉಪ್ಪಾರ, ಬಾಳಪ್ಪ ಕೋಳವಿ, ಪಾಂಡು ಮಳಲಿ, ಭೀಮಶಿ ಅಶಿರೋಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.