RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ

ಘಟಪ್ರಭಾ:ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ 

ದಂಡಾಪೂರ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಯಾಚನೆ ಮಾಡಿದರು.

ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ

ಘಟಪ್ರಭಾ ಏ 27 : ಕಳೆದ 14 ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರ ಅಹವಾಲುಗಳಿಗೆ ಸಾಧ್ಯವಿದ್ದಷ್ಟು ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಸಾಧನೆಗಳನ್ನು ಮನಗಂಡು ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಅಮೂಲ್ಯ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಶಾಸಕ ಹಾಗೂ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಕೋರಿದರು.
ಗುರುವಾರ ರಾತ್ರಿ ಇಲ್ಲಿಗೆ ಸಮೀಪದ ರಾಜಾಪೂರ, ದಂಡಾಪೂರ, ದುರದುಂಡಿ, ಸಂಗನಕೇರಿ, ವಡೇರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸುತ್ತಿದ್ದ ಅವರು, ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ನಾನು ಕೈಗೊಂಡಿರುವ ಜನಪರ ಕಾರ್ಯಗಳನ್ನು ಗುರುತಿಸಿ ನನಗೆ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ರಾಜಾಪೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯನ್ನು ಅರ್ಪಿಸಲಾಗಿದೆ. ಜೊತೆಗೆ 14 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಾರ್ವಜನಿಕರಿಗೆ ಅರ್ಪಿಸಲಾಗಿದೆ. ದುರದುಂಡಿ ಗ್ರಾಮದಲ್ಲಿ ಬಹುವರ್ಷಗಳ ಬೇಡಿಕೆಯಾಗಿದ್ದ ಬ್ರಿಡ್ಜ್ ಕಾಮಗಾರಿಯನ್ನು ದುರದುಂಡಿ ಹಾಗೂ ಸುತ್ತಲಿನ ಗ್ರಾಮಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ದಂಡಾಪೂರಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತ್ಯೇಕ ಗ್ರಾಮ ಪಂಚಾಯತಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಸರ್ಕಾರಿ ಹೊಸ ಪ್ರೌಢ ಶಾಲೆಯನ್ನು ಆರಂಭಿಸಿ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಲಾಗಿದೆ. ಜನರು ಏನು ಹೇಳುತ್ತಾರೆಯೋ ಅದನ್ನೆಲ್ಲ ಮಾಡಿದ್ದೇನೆ. ಹಿಡಕಲ್ ಜಲಾಶಯದಿಂದ ಈ ಭಾಗಗಳಿಗೆ ನೀರು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದು ಹೇಳಿದರು.
ಮುಖವಾಡಕ್ಕೆ ಮೋಸ ಹೋಗದಿರಿ : ನನ್ನ ರಾಜಕೀಯ ಏಳ್ಗೆ ಸಹಿಸದ ವಿರೋಧಿಗಳು ಚುನಾವಣೆ ಸಮಯದಲ್ಲಿ ಬಂದು ಮತದಾರರಿಗೆ ಇನ್ನಿಲ್ಲದ ವದಂತಿಗಳನ್ನು ಸೃಷ್ಟಿಸುತ್ತ ಅಪಪ್ರಚಾರ ಮಾಡುತ್ತಿರುತ್ತಾರೆ. ಕೇವಲ ಭಾಷಣ ಮಾಡುವುದರಿಂದ ಜನರು ಉದ್ಧಾರವಾಗುವುದಿಲ್ಲ. ಪ್ರಗತಿಯಂತೂ ಇಲ್ಲವೇ ಇಲ್ಲ. ಇಂತಹ ಮುಖವಾಡಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಈ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದರು.
ಕಾರ್ಯಕರ್ತರು ಶ್ರಮಿಸಿ : ಈ ಚುನಾವಣೆಯಲ್ಲಿ ಅರಭಾವಿ ಮತಕ್ಷೇತ್ರ ಹೊಸ ಇತಿಹಾಸದತ್ತ ದಾಪುಗಾಲು ಹಾಕುತ್ತಿದೆ. ಅಂದುಕೊಂಡದ್ದು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದಲ್ಲಿಯೇ ಲೀಡ್ ಮಾಡಲು ನಮ್ಮ ಕಾರ್ಯಕರ್ತರ ಪಡೆ ಸಿದ್ಧವಾಗಿರುವುದು ನನಗೆ ಸಂತಸವಾಗುತ್ತಿದೆ. ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿಯಾಗಿರುವೆ ಎಂದು ಹೇಳಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಬಸವಂತ ಕಮತಿ, ವಿಠ್ಠಲ ಪಾಟೀಲ, ಮಾರುತಿ ತೋಳಮರಡಿ, ಅಶೋಕ ಖಂಡ್ರಟ್ಟಿ, ಬೈರು ಯಕ್ಕುಂಡಿ, ರಾಜು ಬೈರುಗೋಳ, ಬಸವರಾಜ ಪಂಡ್ರೊಳ್ಳಿ, ಲಕ್ಷ್ಮಣ ಗಣಪ್ಪಗೋಳ, ಮಹಾದೇವ ತುಕ್ಕಾನಟ್ಟಿ, ಶಿವಲಿಂಗ ಪೂಜೇರಿ, ಶ್ರೀಪತಿ ಗಣೇಶವಾಡಿ, ಸಿದ್ದಪ್ಪ ಢವಳೇಶ್ವರ, ಶಿವಮೂರ್ತಿ ಹುಕ್ಕೇರಿ, ಮಹಾದೇವ ತಾಂಬಡಿ, ರಾಮಣ್ಣಾ ಬಂಡಿ, ಹೊನ್ನಜ್ಜ ಕೋಳಿ, ಶಂಕರ ಗೋರಖನಾಥ, ಬಸವರಾಜ ಮಾಳೇದವರ, ಸುರೇಶ ಕಪರಟ್ಟಿ, ಬಿ.ಟಿ. ಸಂಪಗಾಂವಿ, ಜೈನುಲ್ಲಾ ಮುಲ್ಲಾ, ಹಣಮಂತ ಚಿಪ್ಪಲಕಟ್ಟಿ, ಶಿದ್ಲಿಂಗ ಗಿಡೋಜಿ, ಗೋಪಾಲ ಕುದರಿ, ಬನಪ್ಪ ವಡೇರ, ಅಡಿವೆಪ್ಪ ಹಾದಿಮನಿ, ವಿಠ್ಠಲ ಗಿಡೋಜಿ, ಭೀಮಶಿ ಅಂತರಗಟ್ಟಿ, ಸಿದ್ರಾಮ ಮೂಲಿಮನಿ, ಮುಂತಾದವರು ಉಪಸ್ಥಿತರಿದ್ದರು.

Related posts: