ಗೋಕಾಕ:ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ
ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ
ಗೋಕಾಕ ಏ 28 : ಅರಭಾಂವಿ ಮತ ಕ್ಷೇತ್ರದಲ್ಲಿ ಕಳೆದ ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ. ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದರಲ್ಲೂ ನೀರಾವರಿ ಕ್ಷೇತ್ರಕ್ಕೆ ಪ್ರಮುಖ ಪ್ರಾಶಸ್ತ್ಯೆ ನೀಡುವ ಮೂಲಕ ಈ ಭಾಗದ ರೈತರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಹಾಗೂ ಅರಭಾಂವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶನಿವಾರದಂದು ಚುನಾವಣಾ ಪ್ರಚಾರಾರ್ಥವಾಗಿ ಮತಯಾಚನೆ ಮಾಡಿ ಮಾತನಾಡಿದರು,
ಈಗಿನ ಪರಿಸ್ಥಿತಿಯಲ್ಲಿ ನೀರಿಗೆ ಬಂಗಾರಕ್ಕಿಂತಲೂ ಹೆಚ್ಚಿನ ಬೇಡಿಕೆ ಇದೆ. ರೈತರ ಜಮಿನುಗಳಿಗೆ ನೀರು ಹರಿಸುತ್ತಿದ್ದೇನೆ. ಹಿಡಕಲ್ಲ ಜಲಾಶಯದಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಭಾಗದ ರೈತರಿಗೆ ನೀರು ಕೋಡುವಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ. ಹಿರಣ್ಯಕೇಶಿಯಿಂದ ಘೋಡಗೇರಿ ಹತ್ತಿರ ಲೀಪ್ಟ್ ಮಾಡಿ ಜಿಆರ್‍ಬಿಸಿಗೆ 800 ಕ್ಯೂಸೇಕ್ಸ್ ನೀರು ಹರಿಸುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಬೇಟಗೇರಿ, ಬಗರನಾಳ, ಮನ್ನಿಕೇರಿ, ಕಳ್ಳಿಗುದ್ದಿ, ರಡ್ಡೇರಟ್ಟಿ ಗ್ರಾಮಗಳಲ್ಲಿ ಸರಕಾರದಿಂದ ವಿವಿಧ ಜನೋಪಯೋಗಿ ಕಾಮಗಾರಿಗಳನ್ನು ಅನುಷ್ಠಾನಗೋಳಿಸಲಾಗಿದೆ. ಸುವರ್ಣಗ್ರಾಮೋದಯ, ರಸ್ತೆಗಳ ಸುಧಾರಣೆ, ಸರಕಾರಿ ಪ್ರೌಢ ಶಾಲೆ, ಕುಡಿಯುವ ನೀರು ಸೇರಿದಂತೆ ಜನರ ಮೂಲ ಸೌಕರ್ಯಗಳಿಗೆ ಸ್ಪಂದನೆ ಮಾಡಲ್ಲಾಗಿದೆ. ಕ್ಷೇತ್ರದಲ್ಲಿ ಸಾವಿರಾರು ಕೋಟಿಗಳ ಕಾಮಗಾರಿಗಳು ನಡೆದರೂ ವಿರೋಧಿಗಳು ಮಾತ್ರ ಅಭಿವೃದ್ಧಿಯಾಗಿಲವೆಂದು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ. ಕ್ಷೇತ್ರದಲ್ಲಿ ಜನರಿಂದ ಮಾಯವಾಗುತ್ತಿರುವ ಇಂತವರನ್ನು ತಿರಸ್ಕರಿಸಿ ಅವರನ್ನು ಮನೆಗೆ ಕಳುಹಿಸುವಂತೆ ಹೇಳಿದರು. ಈ ಚುನಾವಣೆಯಲ್ಲಿ ಅರಭಾಂವಿ ಕ್ಷೇತ್ರದ ಜನರಿಗೆ ರಾಜ್ಯದಲ್ಲೊಂದು ಇತಿಹಾಸ ನಿರ್ಮಿಸುವ ಸುವರ್ಣಅವಕಾಶ ಬಂದಿದ್ದು. ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದ ಗೆಲುವು ನೀಡಿ, ಇತಿಹಾಸದ ಪುಟಗಳಲ್ಲಿ ಅರಭಾಂವಿ ಕ್ಷೇತ್ರದ ಹೆಸರು ರಾರಾಜಿಸಲು ಮತದಾರರು ಆಶೀರ್ವಾದ ಮಾಡುವಂತೆ ಕೋರಿದರು.
ಜನರಿಗೆ ಬೇಕಾದ ಎಲ್ಲ ಕಾರ್ಯಗಳನ್ನು ಮಾಡಿರುವ ನನಗೆ ಮುಂದಿನ ಸೇವೆಗಾಗಿ ಮತ್ತೋಮ್ಮೆ ವಿಧಾನ ಸಭೆಗೆ ಆರಿಸಿ ಕಳುಹಿಸಿ. ಮೇ 12 ರಂದು ನಡೆಯುವ ಸಾರ್ವರ್ತಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣಕ್ಕೆ ಇಳಿದಿದ್ದು, ಶೇಜ್ ನಂ 2 ಇದ್ದು, ಕಮಲ ಗುರುತಿಗೆ ಮತವನ್ನು ಚಲಾಯಿಸಿ ರಾಜ್ಯದಲ್ಲಿಯೇ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು
ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಪ್ರಮುಖರಾದ ಬಸವಂತ ಕೋಣಿ, ಗ್ರಾ.ಪಂಅಧ್ಯಕ್ಷ ಲಕ್ಷ್ಮಣ ಚಂದರಗಿ, ಎಮ್.ಆಯ್.ನೀಲನ್ನವರ, ಸುಭಾಸ ಜಂಬಗಿ, ಶ್ರೀಧರ ದೇಯನ್ನವರ, ಬಸನಗೌಡ ದೇಯನ್ನವರ, ಸುಭಾಸ ಕರೆನ್ನವರ, ಈಶ್ವರ ಬಳಿಗಾರ, ಈರಯ್ಯ ಮಠದ, ಶಿವನಪ್ಪ ಮಾಳೇದ, ಪುಂಡಲಿಕ ಪಾರ್ವತೇರ, ಶಿವಲಿಂಗ ಬಳಿಗಾರ, ರಾಮಯ್ಯ ಮಠದ ಮುಂತಾದವರು ಮತಯಾಚನೆಯಲ್ಲಿ ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಂತರ ಬಗರನಾಳ, ಮನ್ನಿಕೇರಿ, ಕಳ್ಳಿಗುದ್ದಿ, ರಡ್ಡೆರಟ್ಟಿ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಅಶೋಕ ಪರುಶೆಟ್ಟಿ, ಪರಮೇಶ್ವರ ಹೊಸಮನ್ನಿ, ಪ್ರಭಾಶುಗರ್ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಅಡಿವೆಪ್ಪ ಅಳಗೋಡಿ, ಶಿವು ಪಾಟೀಲ, ಸುಬಾಸ ಹಾವಾಡಿ, ಬಿ.ಜಿ.ಪಾಟೀಲ, ಬಾಳಪ್ಪ ಗೌಡರ, ಮುದಕಪ್ಪ ಗೋಡಿ, ಕರೆಪ್ಪ ಬಿಸಗುಪ್ಪಿ, ರಾಮನ್ನಾ ಕುದರಿ, ಲಕ್ಷ್ಮಣ ಪಾಶ್ಚಾಪೂರ, ಬರಮಪ್ಪ ಪಾಶ್ಚಾಪೂರ ಹನಮಂತ ಹಾವಾಡಿ, ಸತ್ಯೆಪ್ಪ ಗಡಾದ, ಲಕ್ಷ್ಮಣ ಗಡಾ ಹನಮಂತ ಅಳಗೋಡಿ, ಸುಭಾಸ ಕಮಲದನ್ನಿ, ಲಕ್ಷ್ಮಣ ಸಂಕ್ರಿ, ಮಂಜು ಸಣ್ಣಕ್ಕಿ, ಶಿವಪುತ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.