RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ

ಗೋಕಾಕ:ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ 

ಎ.ವಿ.ಎಂ. ಮುಖ್ಯ ತರಬೇತುದಾರ ಎಸ್.ಬಿ.ಧುಳಾಯಿ ಅಣಕು ಮತದಾನದ ನಡೆಸಿದರು.

ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ
ಗೋಕಾಕ ಏ, 29 ;- ಮತದಾನದ ವೇಳೆ ಮತದಾರ ಚಲಾಯಿಸಿದ ಮತ ನಿರ್ಧಿಷ್ಠ ಅಭ್ಯರ್ಥಿಗೆನೇ ಚಲಾವಣೆಗೊಂಡಿದೆ ಎಂದು ದೃಢ ಪಡಿಸಲು ಚುನಾವಣಾ ಆಯೋಗ ಸಿದ್ಧ ಪಡಿಸಿರುವ ವಿವಿಪ್ಯಾಟ್ ವಿದ್ಯುನ್ಮಾನ ಯಂತ್ರ ನಿಜಕ್ಕೂ ಅದ್ಭುತ ಫಲಿತಾಂಶ ನೀಡುವುದು ಮತ್ತು ಯಾವುದೇ ರೀತಿಯ ಸಂದೇಹಗಳಿಗೆ ಅವಕಾಶವನ್ನೂ ನೀಡದು ಎಂದು ಎ.ವಿ.ಎಂ. ಮುಖ್ಯ ತರಬೇತುದಾರ ಎಸ್.ಬಿ.ಧುಳಾಯಿ ಮನವರಿಕೆ ಮಾಡಿಕೊಟ್ಟರು.
ಭಾನುವಾರ ಇಲ್ಲಿಯ ಮಿನಿ ವಿಧಾನಸೌಧ ಕಟ್ಟಡದಲ್ಲಿ ಜರುಗಿದ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡುತ್ತಿದ್ದ ಅವರು, ಮತದಾನ ಅರಂಭದಿಂದ ಕೊನೆಯ ವರೆಗೆ ಮತಯಂತ್ರಗಳ ತಾಂತ್ರಿಕ ಕ್ಷಮತೆ ಉಂಟಾದಲ್ಲಿ ಸರಿಪಡಿಸಲ ಇಲ್ಲವೇ ನೂತನ ಯಂತ್ರಗಳನ್ನು ಒದಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾರ ಮತದಾನ ಮಾಡುವ ವೇಳೆ ಸಕಾರಣವಿಲ್ಲದೇ ವಿದ್ಯುನ್ಮಾನ ಯಂತ್ರದ ಕುರಿತು ಅಪಪ್ರಚಾರ ನಡೆಸಿದ್ದೇ ಆದಲ್ಲಿ, ಅಂಥ ಮತಕೇಂದ್ರದ ಸಿಬ್ಬಂದಿ ಆ ಮತದಾರನ ಸಮ್ಮುಖದಲ್ಲೇ ಮತ ಯಂತ್ರವನ್ನು ಪುನರಾರಂಭಿಸಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಶಾಬೀತುಗೊಳಿಸಿ, ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಿದ ತಪ್ಪಿಗೆ ಅಂಥವರಿಗೆ 6 ತಿಂಗಳ ಕಾಲಾವಧಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಧುಳಾಯಿ ಸ್ಪಷ್ಟ ಪಡಿಸಿದರು.
ಮತದಾನ ಪೂರ್ವದಲ್ಲಿ ಸೋಮವಾರ ದಿ. 30 ಹಾಗೂ ಮೇ 7ರಂದು ಒಟ್ಟು ಎರಡು ದಿನಗಳಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು ಎಂದು ಸಹಾಯಕ ಚುನಾವಣಾ ಅಧಿಕಾರಿಗಳೂ ಆಗಿರುವ ತಹಶೀಲ್ದಾರ ಜಿ.ಎಸ್.ಮಾಳಗಿ ತಿಳಿಸಿದರು.
ತರಬೇತಿಯಲ್ಲಿ ಒಟ್ಟು 720 ಸಿಬ್ಬಂದಿ ಪಾಲ್ಗೊಳ್ಳಲಿದ್ದು, ಅವರಲ್ಲಿ 360 ಮತಗಟ್ಟೆ ಅಧೀಕ್ಷಾಧಿಕಾರಿಗಳು ಹಾಗೂ 360 ಸಹಾಯಕ ಮತಗಟ್ಟಿ ಅಧೀಕ್ಷಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

Related posts: