RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಈ ಬಾರಿಯೂ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಅಂತರದಿಂದ ಗೆಲ್ಲಿಸಿ : ಯುವ ಧುರೀಣ ಸಂತೋಷ ಮನವಿ

ಗೋಕಾಕ:ಈ ಬಾರಿಯೂ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಅಂತರದಿಂದ ಗೆಲ್ಲಿಸಿ : ಯುವ ಧುರೀಣ ಸಂತೋಷ ಮನವಿ 

ರವಿವಾರದಂದು ಗೋಕಾಕ ಮತಕ್ಷೇತ್ರದ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ ಅವರ ಪರವಾಗಿ ಯುವ ಧುರೀಣ ಸಂತೋಷ ಜಾರಕಿಹೊಳಿ ಮತಯಾಚನೆ ಮಾಡಿದರು.

ಈ ಬಾರಿಯೂ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಅಂತರದಿಂದ ಗೆಲ್ಲಿಸಿ : ಯುವ ಧುರೀಣ ಸಂತೋಷ ಮನವಿ

ಗೋಕಾಕ ಏ, 29 ;- ತಮ್ಮಲ್ಲೇರ ಆಶಿರ್ವಾದದಿಂದ ನಮ್ಮ ತಂದೆಯವರು ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಬಾರಿಯೂ ಆಶಿರ್ವಧಿಸುವಂತೆ ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ಗೋಕಾಕ ಮತಕ್ಷೇತ್ರದ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತ ಮಾತನಾಡಿದರು.
ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಿರೋಧಿಗಳ ಸುಳ್ಳು ವದಂತಿಗಳಿಗೆ ಮಾರುಹೋಗದೆ ಈ ಬಾರಿಯೂ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಅತ್ಯಧಿಕ ಅಂತರದಿಂದ ಆಯ್ಕೆಗೊಳ್ಳುವಂತೆ ಆಶಿರ್ವಧಿಸಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಿರ್ದೇಶಕ ಬಸವರಾಜ ಸಾಯನ್ನವರ, ಮುಖಂಡರುಗಳಾದ ಪರಸಪ್ಪ ಚೂನನ್ನವರ, ಯಲ್ಲಪ್ಪ ಬೂದಿಗೊಪ್ಪ, ವಿಠ್ಠಲ ಮುರ್ಕಿಭಾವಿ, ವಾಮದೇವ ಜಕಬಾಳ, ಕಲ್ಲಪ್ಪ ಚೂನನ್ನವರ, ದಶರಥ ಕಿಚಡಿ, ರಂಗಪ್ಪ ನಂದಿ, ಯಲ್ಲಪ್ಪ ನಂದಿ, ಮುತ್ತೆಪ್ಪ ಖಾನಪ್ಪನವರ, ವಿಠ್ಠಲ ನಂದಿ, ಸಿದ್ದಪ್ಪ ಭಂಡಿ, ಮಲ್ಲಪ್ಪ ಕಲ್ಲಾಡದವರ ಸೇರಿದಂತೆ ಅನೇಕರು ಇದ್ದರು.

Related posts: