ಬೆಳಗಾವಿ:ನಾಡ ವಿರೋಧಿಗಳ ಬೆಂಬಲ ಕೇಳಿದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ : ಭೀಮಾಶಂಕರ ಆಕ್ರೋಶ
ನಾಡ ವಿರೋಧಿಗಳ ಬೆಂಬಲ ಕೇಳಿದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ : ಭೀಮಾಶಂಕರ ಆಕ್ರೋಶ
ಬೆಳಗಾವಿ ಏ 29 : ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಎಂಇಎಸ್ ನಾಯಕ ಕಿರಣ ಠಾಕೂರ್ ಬೆಂಬಲ ಕೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ
ಇಂದು ಮುಂಜಾನೆ ಮತ ಯಾಚನೆ ಮಾಡುವ ಸಂದರ್ಭದಲ್ಲಿ ತಮ್ಮ ಬೆಂಬಲಿಗರ ಜೊತೆ ಕನ್ನಡ ವಿರೋಧಿ ಎಂಈಎಸ್ ನಾಯಕ ಕಿರಣ ಠಾಕೂರ್ ಅವರ ಕಚೇರಿಗೆ ಭೇಟಿ ನೀಡಿ ಬಿಜೆಪಿಗೆ ಮತ ನೀಡುವಂತೆ ಕೊರಿ ವಿವಾದ ಸೃಷ್ಟಿಸಿದ್ದಾರೆ .
ಬಿಜೆಪಿ ಉತ್ತರ ಕ್ಷೇತ್ರದ ಅಭ್ಯರ್ಥಿ ಅನಿಲ ಬೆನಕೆ ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡಪರ ಹೋರಾಟಗಾರ ಭೀಮಾ ಶಂಕರ ಪಾಟೀಲ ಕರ್ನಾಟಕವನ್ನು ಅವಮಾನಿಸಿರುವ ಎಂಇಎಸ್ ನಾಯಕರು ಬೆಂಬಲ ಕೋರಿ ಚುನಾವಣೆ ಎದುರಿಸುತ್ತಿರವ ಬೆನಕೆ ಅವರನ್ನು ಸ್ವಾಭಿಮಾನಿ ಕನ್ನಡಿಗರು ಯಾವುದೇ ಕಾರಣಕ್ಕೂ ಬೆಂಬಲಿಸ ಬಾರದೆಂದು ಮನವಿ ಮಾಡಿದ್ದಾರೆ