RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಒಂದು ಲಕ್ಷ” ಮತಗಳ ಅಂತರದ ಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ ಮನವಿ

ಮೂಡಲಗಿ:ಒಂದು ಲಕ್ಷ” ಮತಗಳ ಅಂತರದ ಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ ಮನವಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವರಾದಿಯಲ್ಲಿ ಮತಯಾಚಿಸಿ ಮಾತನಾಡಿದರು.

ಒಂದು ಲಕ್ಷ” ಮತಗಳ ಅಂತರದ ಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ ಮನವಿ

ಮೂಡಲಗಿ ಏ 29 : “ಅಂದು 75 ಸಾವಿರ. ಇಂದು ಒಂದು ಲಕ್ಷ” ಮತಗಳ ಘೋಷವಾಕ್ಯದ ಅಂತರದ ಜಯಕ್ಕೆ ಶ್ರಮಿಸಿ ರಾಜ್ಯದಲ್ಲಿಯೇ ವಿನೂತನ ದಾಖಲೆ ಬರೆಯುವಂತೆ ಶಾಸಕ ಹಾಗೂ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.
ಶನಿವಾರ ಸಂಜೆ ಅರಭಾವಿ ಮತಕ್ಷೇತ್ರದ ತಿಮ್ಮಾಪೂರ, ಹಳೇಯರಗುದ್ರಿ, ಹೊಸಯರಗುದ್ರಿ, ವೆಂಕಟಾಪೂರ, ಢವಳೇಶ್ವರ, ಅರಳಿಮಟ್ಟಿ ಹಾಗೂ ಅವರಾದಿ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದ ಅವರು, ಮೇ 12 ರಂದು ನಡೆಯುವ ಚುನಾವಣೆ ಇಡೀ ರಾಜ್ಯವೇ ಅರಭಾವಿ ಕ್ಷೇತ್ರದತ್ತ ನೋಡುವಂತೆ ಕಾರ್ಯಕರ್ತರು ದುಡಿಯುವಂತೆ ಕೋರಿದರು.
ಅರಭಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು. ಈಗಾಗಲೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿರುವುದರಿಂದ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ನೆರವು ಸಿಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನೀರಾವರಿಗೆ ಪ್ರಮುಖ ಪ್ರಾಶಸ್ತ್ಯ ನೀಡುವರು ಎಂದು ಹೇಳಿದರು.
ಕ್ಷೇತ್ರದಲ್ಲಿ ಸಾಧಿಸಿರುವ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ನೋಡಿ ನನಗೆ ಮತ ಚಲಾಯಿಸಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ. ನಿಮ್ಮ ಸೇವೆಗೆ ಸದಾ ಸಿದ್ಧನಾಗಿದ್ದೇನೆ. ಬೇರೆಯವರಂತೆ ಕೇವಲ ಚುನಾವಣೆಗೊಮ್ಮೆ ಬಂದು ಹೋಗುವ ವ್ಯಕ್ತಿ ನಾನಲ್ಲ. ನಮ್ಮ ರಾಜಕೀಯ ವಿರೋಧಿಗಳಿಗೆ ಕೇವಲ ನನ್ನನ್ನು ಟೀಕಿಸುವುದೊಂದೇ ಕೆಲಸವಾಗಿದೆ. ಅವರಿಂದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಮನೆಯ ಮಗನಂತೆ ಕಂಡು ಪ್ರೀತಿ-ವಿಶ್ವಾಸ ನೀಡುತ್ತಿರುವ ನಿಮ್ಮ ಋಣ ನನ್ನ ಮೇಲಿದೆ ಎಂದು ಹೇಳಿದರು.
ಪ್ರತಿ ಗ್ರಾಮಗಳಲ್ಲಿಯೂ ಜನರು ಹೇಳಿದ ಹಾಗೆ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದೇನೆ. ಸರ್ಕಾರದ ಅನುದಾನ ತಂದು ಸಮಗ್ರ ಪ್ರಗತಿಗೆ ಶ್ರಮಿಸಿದ್ದೇನೆಂದು ಹೇಳಿದರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, 14 ವರ್ಷಗಳ ಅವಧಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಡಿರುವ ಕೊಡುಗೆ ಅವಿಸ್ಮರಣೀಯ. ಇಂತಹವರನ್ನು ಪಡೆದಿರುವುದು ನಮ್ಮೆಲ್ಲರ ಪುಣ್ಯ. ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಶೇಜ್ ನಂ. 2 ಇದ್ದು ಕಮಲ ಗುರ್ತಿಗೆ ಮತ ಹಾಕಿ ಮತ್ತೊಂದು ಅವಧಿಗೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ನಿಂಗಪ್ಪಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಗಿರೀಶ ನಾಡಗೌಡ, ಕಲ್ಲಪ್ಪ ರಂಜನಗಿ, ಸತ್ತೆಪ್ಪ ನಾಯಿಕ, ಹಣಮಂತ ಪೂಜೇರಿ, ದೇವನಗೌಡ ಪಾಟೀಲ, ಅಲ್ಲಪ್ಪ ಕುದರಿಮನಿ, ಬಸವರಾಜ ರಂಜನಗಿ, ಗಿರೀಶ ಹಳ್ಳೂರ, ಸಂಗಪ್ಪ ಕಂಟಿಕಾರ, ಬಸಪ್ಪ ಬಾರ್ಕಿ, ಸಿ.ಎಲ್. ನಾಯಿಕ, ಅಲ್ಲಪ್ಪ ನಂದಗನ್ನವರ, ದುಂಡಪ್ಪ ಪಾಟೀಲ, ಈರಣ್ಣಾ ಜಾಲಿಬೇರಿ, ಮಹಾದೇವ ನಾಡಗೌಡ, ಕೃಷ್ಣಾ ಚನ್ನಾಳ, ಲಕ್ಕಪ್ಪ ಅವರಾದಿ, ಸಿದ್ಧಾರೂಢ ಮಬನೂರ, ಭೀಮಶಿ ಪಾಟೀಲ, ಬೀರಪ್ಪ ಹೊಸಟ್ಟಿ, ಸುರೇಶ ವಂಟಗೋಡಿ, ರಂಗಪ್ಪ ತೆಗ್ಗಿ, ಶೇಷಪ್ಪ ಪಾಟೀಲ, ಶ್ರೀಕಾಂತ ಚೌರಡ್ಡಿ, ವೆಂಕಪ್ಪ ಕೋಳಿಗುಡ್ಡ, ಮಹಾದೇವ ವಟವಟಿ, ಶಿವಾನಂದ ಅಂಗಡಿ, ರಂಗಪ್ಪ ಅರಳಿಮಟ್ಟಿ, ಬಸವರಾಜ ಹಿರೇಮಠ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು

Related posts: