ಘಟಪ್ರಭಾ:ಮೇ 4 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘಟಪ್ರಭಾದಲ್ಲಿ ಚುನಾವಣಾ ಪ್ರಚಾರ
ಮೇ 4 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘಟಪ್ರಭಾದಲ್ಲಿ ಚುನಾವಣಾ ಪ್ರಚಾರ
ಘಟಪ್ರಭಾ ಏ 30 : ಮೇ 4 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಧಾನ ಸಭೆ ಚುನಾವಣೆ ಪ್ರಚಾರಾರ್ಥ ಘಟಪ್ರಭಾಕ್ಕೆ ಆಗಮಿಸಲಿದ್ದಾರೆಂದು ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ ಕಾಡದವರ ತಿಳಿಸಿದರು.
ಅವರು ಸೋಮವಾರ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ, ಯಡಿಯೂರಪ್ಪನವರು ಅಂದು ಹೆಲಿಕಾಪ್ಟರ್ ಮೂಲಕ ಆಗಮಿಸಿ ಇಲ್ಲಿಯ ಎಸ್.ಡಿ.ಟಿ ಶಾಲಾ ಮೈದಾನದಲ್ಲಿ 12 ಗಂಟೆಗೆ ಹಮ್ಮಿಕೊಳ್ಳಲಾಗುವ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ 10 ರಿಂದ 15 ಸಾವಿರ ಜನ ಕಾರ್ಯಕರ್ತರು ಬಾಗವಹಿಸಲಿದ್ದಾರೆ. ಈ ಬಾರಿ ರಾಜ್ಯದ ಜನ ಬದಲಾವಣೆ ಬಯಸಿದ್ದು, ಬಿ.ಜೆ.ಪಿ ಸರ್ಕಾರ ರಚನೆಯಾಗಿ ಬಿ.ಎಸ್.ಯಡಿಯೂರಪ್ಪನವರು ಮತ್ತೊಮೆ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದರು.
ಗೋಕಾಕ ವಿಧಾನ ಸಭಾ ಮತಕ್ಷೇತ್ರ ಟಿಕೀಟ್ ಆಕಾಂಕ್ಷಿ ಹಿರಿಯ ಬಿಜೆಪಿ ಮುಖಂಡ ಸುರೇಶ ಪಾಟೀಲ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಡದವರ ಅವರು, ಸುರೇಶ ಪಾಟೀಲ ಅವರ ಸ್ಪರ್ಧೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಇಲ್ಲಾ. ಅವರು ಪಕ್ಷದ ಅತ್ಯಂತ ಹಿರಿಯ ಕಾರ್ಯಕರ್ತರು ಅವರಿಗೆ ಟಿಕೀಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ನಮ್ಮ ಜಿಲ್ಲಾ ಮಟ್ಟದ ನಾಯಕರಿಂದ ನಡೆದಿದ್ದು, ಅವರು ಮುಂದೆ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ರಾಮಪ್ಪಾ ದೇಮನ್ನವರ, ಅಪ್ಪಯ್ಯಪ್ಪಾ ಬಡಕುಂದ್ರಿ, ಕಲ್ಲಪ್ಪಾ ಕಾಡದವರ ಉಪಸ್ಥಿತರಿದ್ದರು.