RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಾಡ ವಿರೋಧಿಗಳಿಗೆ ಧಿಕ್ಕರಿಸಿ : ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರಿಗೆ ಖಾನಪ್ಪನವರ ಮನವಿ

ಗೋಕಾಕ:ನಾಡ ವಿರೋಧಿಗಳಿಗೆ ಧಿಕ್ಕರಿಸಿ : ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರಿಗೆ ಖಾನಪ್ಪನವರ ಮನವಿ 

ನಾಡ ವಿರೋಧಿಗಳಿಗೆ ಧಿಕ್ಕರಿಸಿ : ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರಿಗೆ ಖಾನಪ್ಪನವರ ಮನವಿ

ಗೋಕಾಕ ಏ 30 : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡವನ್ನು ಮತ್ತು ಕರ್ನಾಟಕವನ್ನು ಅವಮಾನಿಸುತ್ತಿರುವ ನಾಡವಿರೋಧಿಗಳಿಗೆ ಮತ್ತು ತಮ್ಮ ಸ್ವಾಭಿಮಾನ ಬಿಟ್ಟು ಅವರ ಬೆಂಬಲವನ್ನು ಕೇಳುತ್ತಿರುವ ಯಾವುದೇ ಪಕ್ಷಗಳ ಅಭ್ಯರ್ಥಿಗಳಿಗೆ ಬೆಳಗಾವಿ ಮತ್ತು ಗಡಿ ಭಾಗದಲ್ಲಿರುವ ಸ್ವಾಭಿಮಾನಿ ಕನ್ನಡಿಗರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರದ ಆಸೆಗಾಗಿ ಕೈಕಾಲು ಬಿದ್ದು ನಂತರ ಕನ್ನಡವನ್ನು ಅವಮಾನಿಸುವ ವ್ಯಕ್ತಿಗಳನ್ನು ಕನ್ನಡಿಗರು ಯಾವುದೇ ಮುಲಾಜಿಲ್ಲದೇ ಧಿಕ್ಕರಿಸುವ ಗಡಸುತನ ತೋರಬೇಕಾಗಿದೆ. ಬೆಳಗಾವಿ ಗಡಿಯ ವಿಚಾರದಲ್ಲಿ ನಿರಂತರವಾಗಿ ಕನ್ನಡ ವಿರೋಧಿ ಚಟುವಟಿಕೆ ನಡೆಯಿಸಿ, ಕನ್ನಡ ಮತ್ತು ಮರಾಠಿ ಭಾಷೆಯ ಜನರ ಭಾವನೆಗಳಿಗೆ ಬೆಂಕಿ ಹಚ್ಚಿ ಕನ್ನಡವನ್ನು ಅವಮಾನಿಸುವ ನಾಡದ್ರೋಹಿ ಕಿರಣ ಠಾಕೂರ ಕಚೇರಿಗೆ ತೆರಳಿ ಬೆಂಬಲ ಕೋರಿರುವ ಬೆಳಗಾವಿ ಉತ್ತರ ಕ್ಷೇತ್ರದ ಅನೀಲ ಬೆನಕೆ ಅವರ ಕ್ರಮ ತರವಲ್ಲ. ಬೃಹತ್ ಪ್ರಮಾಣದಲ್ಲಿಯೇ ಕನ್ನಡಿಗರು ಇರುವಾಗ ರಾಜಕೀಯ ಇಚ್ಛಾಶಕ್ತಿ ತೊರೆದು ನಾಡವಿರೋಧಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಇಂತಹÀ ಜನಪ್ರತಿನಿಧಿಗಳಿಗೆ ಕನ್ನಡಿಗರು ತಕ್ಕ ಉತ್ತರ ನೀಡಬೇಕಾಗಿದೆ. ಅಂದಾಗ ಮಾತ್ರ ಬೆಳಗಾವಿಯಲ್ಲಿ ಕನ್ನಡ ಗಟ್ಟಿಯಾಗಿ ಉಳಿಯಲು ಮತ್ತು ಬೆಳೆಯಲು ಸಾಧ್ಯ. ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಮತ್ತು ಖಾನಾಪೂರ ಕ್ಷೇತ್ರಗಳಲ್ಲಿಯೂ ಕನ್ನಡ ವಿರೋಧಿಗಳು ಮತ್ತು ಮಹಾರಾಷ್ಟ್ರಕ್ಕೆ ಜಯಕಾರ ಹಾಕುವ ನಾಲಾಯಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಯಾ ಕ್ಷೇತ್ರದಲ್ಲಿಯ ಸ್ವಾಭಿಮಾನಿ ಕನ್ನಡಿಗರು ಯಾವುದೇ ಕಾರಣಕ್ಕೂ ಅವರನ್ನು ಬೆಂಬಲಿಸಬಾರದು. ಇಂತಹ ಕನ್ನಡ ವಿರೋಧಿ ಜನಪ್ರತಿನಿಧಿಗಳಿಂದಲೇ ಇಂದು ಬೆಳಗಾವಿಯಲ್ಲಿ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಂಡು ಇಂತಹ ಜನಪ್ರತಿನಿಧಿಗಳನ್ನು ಧಿಕ್ಕರಿಸಿದರೆ ಕನ್ನಡತನ ಉಳಿಯಲು ಸಾಧ್ಯ. ಆ ದಿಸೆಯಲ್ಲಿ ಎಲ್ಲ ಕನ್ನಡಿಗರು ಒಂದಾಗಬೇಕೆಂದು ಖಾನಪ್ಪನವರ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಕನ್ನಡಿಗರು ಈ ಮನೋಭಾವ ತಾಳದಿದ್ದ ಪಕ್ಷದಲ್ಲಿ ಯಾವ, ಯಾವ ಕ್ಷೇತ್ರಗಳಲ್ಲಿ ಕನ್ನಡ ವಿರೋಧಿ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ ಅಂತಹ ಪ್ರದೇಶಗಳಲ್ಲಿ ಸ್ವಾಭಿಮಾನಿ ಕನ್ನಡಿಗರ ತಂಡ ಕಟ್ಟಿಕೊಂಡು ನಾಡ ವಿರೋಧಿ ಅಭ್ಯರ್ಥಿಗಳನ್ನು ಬೆಂಬಲಿಸದಂತೆ ಕರಪತ್ರಗಳನ್ನು ಹಂಚಲಾಗುವುದೆಂದು ಖಾನಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: