RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ

ಗೋಕಾಕ:ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ 

ಶೂನ್ಯ ಸಂಪಾದನ ಮಠದಲ್ಲಿ ಜರುಗಿದ 122ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಜಮಖಂಡಿ ತಾಲೂಕಿನ ಹುಲ್ಯಾಳ ಆಶ್ರಮದ ಮಾತೋಶ್ರೀ ಶ್ರೀದೇವಿ ತಾಯಿ ಅವರನ್ನು ಸನ್ಮಾನಿಸಲಾಯಿತು.

ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ

ಗೋಕಾಕ ಮೇ 1 : ಈ ಲೋಕದಲ್ಲಿ ಯಾವುದೇ ಗುಡಿ ಗುಂಡಾರಗಳಿಗಿಂತ ನಿಮ್ಮ ತಂದೆ ತಾಯಿಂದರೇ ನಿಜವಾದ ದೇವರಾಗಿದ್ದು ಅವರ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ಜಮಖಂಡಿ ತಾಲೂಕಿನ ಹುಲ್ಯಾಳ ಆಶ್ರಮದ ಮಾತೋಶ್ರೀ ಶ್ರೀದೇವಿ ತಾಯಿ ಹೇಳಿದರು.
ಅವರು ಸ್ಥಳಿಯ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ ವಚನ ಸಾಹಿತ್ಯ ಚಿಂತನಮಂಥನ ವೇದಿಕೆ ಮತ್ತು ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 122ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಚಿಂತನಕಾರರಾಗಿ ಭಾಗವಹಿಸಿ ಮಾತನಾಡಿದರು.
“ಸಿದ್ಧರಾಮೇಶ್ವರರ ವಚನ ದರ್ಶನ” ಎಂಬ ವಿಷಯದ ಕುರಿತು ಮಾತನಾಡಿದ ಅವರು 12 ನೇ ಶತಮಾನದ ಶರಣರು ಸರ್ವಕಾಲಕ್ಕೂ ಸರ್ವರಿಗೂ ಆದರ್ಶನೀಯ ಪೂಜ್ಯನಿಯ ವ್ಯಕ್ತಿಗಳಾಗಿದ್ದು ಅವರ ಜೀವನವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ತಾಯಂದಿರು ದೂರದರ್ಶನದ ಧಾರವಾಹಿಗಳ ದಾಸರಾಗುತ್ತಿದ್ದು ಈ ಪ್ರವೃತ್ತಿಯನ್ನು ತೊರೆದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನಮಠದ ಪೂಜ್ಯ ಮುರುಘರಾಜೇಂದ್ರ ಮಹಸ್ವಾಮಿಜಿ ವಹಿಸಿದ್ದರು.ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಸುಜಾತಾ ಮುಚ್ಚಂಡಿ ಹಿರೇಮಠ, ಬಸವರಾಜ ಹತಪಾಕಿ, ಪ್ರಸನ್ನ ತಂಬಾಕೆ ಇದ್ದರು.
ಬಸವರಾಜ ಕಪರಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಕೆ.ಮಠದ ನಿರೂಪಿಸಿ,ವಂದಿಸಿದರು.

Related posts: