ಗೋಕಾಕ:ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ
ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ
ಗೋಕಾಕ ಮೇ 3 : ಚುನಾವಣೆಯ ಮತದಾನದ ದಿನದಂದು ಮತದಾನದ ಹಕ್ಕನ್ನು ಹೊಂದಿರುವ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಎಸ್.ಎಮ್.ಹಿರೇಮಠ ಹೇಳಿದರು.
ಬುಧವಾರದಂದು ಸಾಯಂಕಾಲ ಸಮೀಪದ ಗೋಕಾಕ-ಪಾಲ್ಸ್‍ನ ಮಿಲ್ಲಿನ ಸಭಾ ಭವನದಲ್ಲಿ ಮಿಲ್ಲಿನ್ ಕಾರ್ಮಿಕರಾಗಿ ಹಮ್ಮಿಕೊಂಡ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಯು ಪ್ರಜಾಪ್ರಭುತ್ವ ಸಂಪದ್ರಾಯವನ್ನು ಎತ್ತಿ ತೋರಿಸುತ್ತದೆ. ಮತದಾರರು ಯಾವುದೇ ಆಸೆ, ಅಮೀಷ, ಪ್ರಭಾವಗಳಿಗೆ ಒಳಗಾಗದೇ ಮತದಾನದ ಮೌಲ್ಯವನ್ನು ಹೆಚ್ಚಿಸಬೇಕೆಂದು ಹೇಳಿದರು.
ಚುನಾವಣಾ ಸೆಕ್ಟರ್ ಆಫೀಸರ್ ವಿ.ಎಸ್.ತಡಸಲೂರ ಅವರು ಮತದಾನ ಖಾತ್ರಿ ಯಂತ್ರದ ಕುರಿತು ಕಾರ್ಮಿಕರಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳುವಳಿಕೆ ನೀಡಿದರು.
ಗೋಕಾಕ ಶಹರ ಠಾಣೆಯ ಪಿಎಸ್‍ಐ ಸಂತೋಷ ಹಳ್ಳೂರ ಅವರು ಕಾರ್ಮಿಕರಿಗೆ ಜಿಲ್ಲಾ ಸ್ವೀಪ್ ಸಮಿತಿಯವರು ನೀಡಿದ ಮತದಾನದ ಮಮತೆಯ ಕರೆಯೋಲೆಯ ಪತ್ರವನ್ನು ನೀಡಿ, ಮತದಾನದ ದಿನದಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ಎಮ್.ಎಸ್.ನಾಗನ್ನವರ, ಮಿಲ್ಲಿನ ಅಸಿಸ್ಟಂಟ ಮ್ಯಾನೇಜರ್ ಚಿದಂಬರ ಕುಲಕರ್ಣಿ, ಕೊಣ್ಣುರ ಪುರಸಭೆಯ ಕಿರಿಯ ಅಭಿಯಂತರ ಎಮ್,ಎಸ್.ತೇಲಿ, ಎಸ್.ಜೆ.ಕುರಣಿ, ಎಮ್.ಎ.ಪೆದಣ್ಣವರ, ವಾಯ್.ಎನ್.ಚಲವಾದಿ, ಆರ್.ಕೆ.ಭವಾನಿ, ಬಾಳನಾಯ್ಕ ಕುಮರೇಶಿ, ಭಾರತಿ ವಾಳಕೆ, ಮಹಾಂತೇಶ ಮನ್ನಿಕೇರಿ ಸೇರಿದಂತೆ ಅನೇಕರು ಇದ್ದರು.
ಫೋಟೋ 03 ಜಿಕೆಕೆ-2
ಗೋಕಾಕ: ಸಮೀಪದ ಗೋಕಾಕ-ಪಾಲ್ಸ್‍ನ ಮಿಲ್ಲಿನ ಸಭಾ ಭವನದಲ್ಲಿ ಮಿಲ್ಲಿನ್ ಕಾರ್ಮಿಕರಾಗಿ ಹಮ್ಮಿಕೊಂಡ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಭೋದಿಸುವ ಕಾರ್ಯಕ್ರಮದಲ್ಲಿ ಗೋಕಾಕ ಶಹರ ಠಾಣೆಯ ಪಿಎಸ್‍ಐ ಸಂತೋಷ ಹಳ್ಳೂರ ಅವರು ಮಾತನಾಡುತ್ತಿರುವುದು.