ಬೆಳಗಾವಿ :ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ
ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ
ಬೆಳಗಾವಿ ಮೇ 4 : ವಿಧಾನ ಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಸದಲಗಾ ಮತಕ್ಷೇತ್ರ ಭರ್ಜರಿ ಸದ್ದು ಮಾಡುತ್ತಿದೆ ಈ ಕ್ಷೇತ್ರದಲ್ಲಿ ಕಾಂಗ್ರೇಸ ಮತ್ತು ಬಿಜೆಪಿ ನಡುವೆ ತುರುಸಿನ ಸ್ವರ್ಧೆ ಏರ್ಪಟ್ಟಿದ್ದು , ಉಭಯ ಪಕ್ಷಗಳ ಮುಖಂಡರು ರಣತಂತ್ರ ರೂಪಿಸುವುದರಲ್ಲಿ ಬ್ಯೂಷಿಯಾಗಿದ್ದಾರೆ . ಈ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯಾಗಿ ತಗೆದುಕೊಂಡಿರುವ ಬಿಜೆಪಿ ಪಕ್ಷದ ಮುಖಂಡರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ
ಶಾಸಕ ಗಣೇಶ ಹುಕ್ಕೇರಿ ಅವರನ್ನು ಮಣಿಸಿ ಬಿಜೆಪಿ ಗೆಲ್ಲಿಸಲು ಬಿಜೆಪಿ ವರಿಷ್ಠರು ರಾಜಕೀಯ ಆಟ ಶುರು ಮಾಡಿದ್ದರೆ, ಗಣೇಶ ಹುಕ್ಕೇರಿ ಅವರು ಎರಡನೇ ಬಾರಿ ಚುನಾಯಿತರಾಗಲು ಕಸರತ್ತು ನಡೆಸಿದ್ದಾರೆ. ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಚುನಾವಣೆ ಎರಡು ಕುಟುಂಬಗಳ ಮಧ್ಯದಲ್ಲಿ ನಡೆಯುತ್ತಿದೆಯಾ ಎಂಬ ಭಾವನೆ ಜನರಲ್ಲಿ ಮೂಡಿದೆ.
ತಾವು ಮಾಡಿದ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎನ್ನುತ್ತಾರೆ ಗಣೇಶ ಹುಕ್ಕೇರಿ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನರು ಬೇಸತ್ತಿದ್ದು, ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದಾರೆ ಅದಕ್ಕಾಗಿ ಜಯ ನಮ್ಮದೇ ಎನ್ನುತ್ತಾರೆ ಅಣ್ಣಾಸಾಬ ಜೊಲ್ಲೆ.
ಇತ್ತ ಜೆಡಿಎಸ್ ಹಾಗೂ ಬಿಎಸ್ಪಿ ಹೊಂದಾಣಿಕೆಯಿಂದ ಇಲ್ಲಿ ಬಿಎಸ್ಪಿ ಅಭ್ಯರ್ಥಿ ಸದಾಶಿವ ವಾಳಕಿ ಸ್ಪರ್ಧಾ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಬಿಜೆಪಿ-ಕಾಂಗ್ರೆಸ್ ಮಧ್ಯದಲ್ಲಿ ನೇರ ಹಣಾಹಣಿ ನಡೆಯಲಿದ್ದು, ಅಂತಿಮವಾಗಿ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ