ಘಟಪ್ರಭಾ:ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್
ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್
ಘಟಪ್ರಭಾ ಮೇ 4 : ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಮತ ನೀಡಿ 20 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕೆಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶುಕ್ರವಾರದಂದು ಇಲ್ಲಿಯ ಎಸ್.ಡಿ.ಟಿ. ಶಾಲಾ ಮೈದಾನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೀಗ ಬೆಂಗಳೂರಿನಲ್ಲಿ “ನಮ್ಮ ವಚನ” ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ಬಂದಿದ್ದೇನೆ. ಇದರಿಂದ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದ ಅವರು, ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಹೇಳಿದರು.
ಹಣ, ಅಧಿಕಾರದ ಬಲದಿಂದ ಗೆಲುವು ಸಾಧಿಸುವುದಕ್ಕೆ ಅಂತ್ಯ ಹಾಡುವ ಕಾಲ ಈಗ ಬಂದಿದೆ. ಪ್ರಜಾತಂತ್ರದಲ್ಲಿ ಸ್ವತಂತ್ರವಾಗಿ ಮತದಾನ ಮಾಡದ ಪರಿಸ್ಥಿತಿ ಇಲ್ಲಿಲ್ಲ. ಗುಂಡಾಗೀರಿ ಎಲ್ಲೇ ಮೀರಿದೆ ಅಂತಹದರಲ್ಲೂ ಗಟ್ಟಿಧೈರ್ಯ ಮಾಡಿರುವ ಅಶೋಕ ಪೂಜಾರಿಗೆ ಆಶೀರ್ವದಿಸಿ ಎಂದು ಮತಯಾಚಿಸಿದರು.
ನಾನು ಮೇ 17ರಂದು ಬೆಳಗಾವಿ ಜಿಲ್ಲೆಯ ಅಶೋಕ ಪೂಜಾರಿ ಸೇರಿ 15ಜನ ಬಿಜೆಪಿ ಎಮ್‍ಎಲ್‍ಎ ಗಳೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತೆನೆ. ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ರೈತರ 1ಲಕ್ಷ ಸಾಲವನ್ನು ಮನ್ನಾ ಮಾಡುತ್ತೇನೆ ಹಾಗೂ ಇಂದು ಬಿಡುಗಡೆ ಮಾಡಿದ ಬಿಜೆಪಿ ಪ್ರಣಾಳಿಕೆಯಾದ ನಮ್ಮ ವಚನ ಇದರಿಂದ ಬಿಜೆಪಿಗೆ 5 ಪರ್ಶಂಟ್ ಓಟು ಹೆಚ್ಚಿಗೆ ಇನ್ನು ಮುಂದೆ ಸಿಗುತ್ತದೆ ಗೋಕಾಕ ತಾಲೂಕಿನಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇಲ್ಲದಂತಾಗಿದ್ದು ಅದಕ್ಕಾಗಿ ತಾವೆಲ್ಲರು ಪಣತೊಟ್ಟು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಅದರಂತೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬದಾಮಿಗೆ ಓಡಿ ಬಂದಿದ್ದಾರೆ, ಅಲ್ಲಿ ನಮ್ಮ ಪ್ರಬಲ ಅಭ್ಯರ್ಥಿ ಶ್ರೀರಾಮುಲು ಅತ್ಯಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು.
ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಮಾತನಾಡಿ, ಈ ಬಾರಿಯ ಚುನಾವಣೆ ನನ್ನದಲ್ಲ ಸಮಸ್ಥ ಜನರ ಚುನಾವಣೆಯಾಗಿದೆ. ಗೆಲುವ ನನ್ನದಲ್ಲ ನಿಮ್ಮದು. ನಾನೊಬ್ಬ ಜಂಗಮನಾಗಿ ನಿಮ್ಮಲ್ಲಿ ಜೋಳಗಿ ಮೂಲಕ ಮತಯಾಚಿಸುತ್ತಿದ್ದೇನೆ. ಮತದಾರ ಬಾಂಧವರು ಪವಿತ್ರವಾದ ಈ ಜÉೂೀಳಿಗೆಯಲ್ಲಿ ಮತಹಾಕಬೇಕು. ನಿಮ್ಮ ಈ ಮತ ಸುರಕ್ಷಿತವಾಗಿರುತ್ತದೆ. ಒಟ್ಟಾರೆ ನಗರದಲ್ಲಿ ಗುಲಾಮಗಿರಿ ಸಂಸ್ಕøತಿ ಕಿತ್ತೊಗೆದು ಸ್ವಾಭಿಮಾನದ ಬದುಕು ನಡೆಸುವಂತಾಗಬೇಕು.
ಸಂಸದ ಸುರೇಶ ಅಂಗಡಿ ಮಾತನಾಡಿ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಸೇತುವ ನಿರ್ಮಿಸಿ ರೈತರ ಹಾಗೂ ಜನರ ಹೃದಯ ಗೆದ್ದಿದ್ದಾರೆ. ಇಂತ ರೈತಪರ ಕಾಳಜಿ ಹೊಂದಿದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಸನ್ನಿಹಿತ ಎಂದರು.
ವೇದಿಕೆ ಮೇಲೆ ಉಮೇಶ ಕತ್ತಿ, ಮಹಾಂತೇಶ ಕವಟಗಿಮಠ, ಎಂ.ಎಲ್. ಮುತ್ತೇನ್ನವರ, ಕೆ.ಪಿ. ನಂಜುಡಿ, ಈರಪ್ಪಾ ಕಡಾಡಿ, ರಾಜು ಮುನ್ನೊಳ್ಳಿ, ಎಸ್.ವಿ ದೆಮಶೆಟ್ಟಿ, ವಿರೂಪಾಕಿ ಎಲಿಗಾರ, ಉಮೇಶ ನಿರ್ವಾಣಿ, ಸುರೇಶ ಕಾಡದವರ, ಹೇಮಾ ಬಂಢಾರಿ, ಬಸವರಾಜ ಹುದ್ದಾರ, ಶ್ರೀದೇವಿ ತಡಕೋಡ, ಅಪ್ಪಯಪ್ಪಾ ಬಡಕುಂದ್ರಿ, ಲಕ್ಕಪ್ಪ ತಾಶೀಲ್ದಾರ, ಆರ್.ಎಸ್. ಮುತಾಲಿಕ, ಬಸವರಾಜ ಹಿರೇಮಠ ಸೇರಿದಂತೆ ಇತರರು ಇದ್ದು.
ಇದೇ ಸಂದರ್ಭದಲ್ಲಿ ಕೆಲವರು ಬಿಜೆಪಿಗೆ ಸೇರ್ಪಡೆಗೊಂಡರು. ಅಶೋಕ ಒಸ್ವಾಲ ಸ್ವಾಗತಿಸಿ, ವಂದಿಸಿದರು.