ಚಿಕ್ಕೋಡಿ:ಪ್ರಧಾನಿ ಮೋದಿ ಅವರದು ಮನ ಬರಿ ಕೀ ಬಾತ , ಸಿದ್ದರಾಮಯ್ಯ ನವರದು ಕಾಮ ಕೀ ಬಾತ : ಸಿ. ಎಂ ಇಬ್ರಾಹಿಂ
ಪ್ರಧಾನಿ ಮೋದಿ ಅವರದು ಮನ ಬರಿ ಕೀ ಬಾತ , ಸಿದ್ದರಾಮಯ್ಯ ನವರದು ಕಾಮ ಕೀ ಬಾತ : ಸಿ. ಎಂ ಇಬ್ರಾಹಿಂ
ಚಿಕ್ಕೋಡಿ ಮೇ 4 : ಪ್ರಧಾನಿ ಮೋದಿ ಅವರು ಕಳೆದ ನಾಲ್ಕು ವರ್ಷಗಳಿಂದ ಬರೀ ಮನ ಕೀ ಬಾತ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಆದರೆ ಸಿದ್ದರಾಮಯ್ಯ ನವರು ಕಾಮ ಕೀ ಬಾತ ಹೇಳಿ ಕಳೆದ ಐದು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ವಿಧಾಪ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದರು
ಅವರು ಶುಕ್ರವಾರದಂದು ಸಾಯಂಕಾಲ ಕುಡಚಿ ಮತಕ್ಷೇತ್ರದಲ್ಲಿ ಕಾಂಗ್ರೇಸ ಅಭ್ಯರ್ಥಿ ಅಮಿತ ಘಾಟಗೆ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು
ಸಭ ಕಾ ಸಾಥ ಸಭ ಕಾ ವಿಕಾಸ ಎನ್ನುತಾ ದೇಶದ ವಿಕಾಸ ಮಾಡದೇ ದೇಶದ ವಿನಾಶ ಮಾಡಿ ನಿರವ್ ಮೋದಿ , ಲಲತಿ ಮೋದಿ , ಮಲ್ಯಾ ನಂತವರ ವಿಕಾಸ ಮಾಡುತ್ತಿರುವ ಮೋದಿ ತಾನೋಬ್ಬ ಕಾವಲುಗಾರ ಎನ್ನುತ್ತಿರುವುದು ಹಾಸ್ಯಾಸ್ಪದ . ಇವರು ದೇಶದ ಜನರ ಹಣವನ್ನು ಕೋಳ್ಳೆ ಹೊಡೆದ್ದಿದಾರೆ ಜನರು ಹಣಕ್ಕಾಗಿ ಎಟಿಎಂ ಗಳ ಮುಂದೆ ಸಾಲುಗಟ್ಟಿ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ . ಇಂದು ದೇಶದಲ್ಲಿ ಅರಾಜಕತೆ , ಭಯದ ವಾತಾವರಣ ಸೃಷ್ಟಿಯಾಗಿದೆ ಯು.ಪಿ , ಗುಜರಾತದಲ್ಲಿಯ ದಲಿತರು ಇಂದು ಹಿಂದು ಧರ್ಮ ಬಿಟ್ಟು ಬೌದ್ಧ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ . ಕುಡಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜೀವ ಕೋಮುವಾದಿ ಪಕ್ಷ ಸೇರುವ ಮೂಲಕ ದಲಿತರನ್ನು ಬಲಿಕೋಡುವ ಕಾರ್ಯ ಮಾಡಿದ್ದಾರೆ ದಲಿತರು ಉಳಿಯಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕಾಗಿದೆ
ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತರ ಅಭಿವೃದ್ಧಿಗಾಗಿ ಸೂಮಾರು 1.20.ಕೊಟ್ಟಿ ಅನುದಾನ ನೀಡಿದ ಚನ್ನಮ್ಮನ ಬಲಗೈ ಭಂಟ ಸಂಗೋಳ್ಳಿ ರಾಯಣ್ಣ ನ ವಂಶದ ಸಿದ್ದರಾಮಯ್ಯ ನವರು ಒಳ್ಳೆಯ ಆಡಳಿತ ನೀಡಿದ್ದಾರೆಂದು ಸಿ.ಎಂ ಇಬ್ರಾಹಿಂ ಹೇಳಿದರು
ವಾಜಪೇಯಿ ಹೊಗಳಿದ ಸಿ.ಎಂ ಇಬ್ರಾಹಿಂ :
ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿಯನ್ನು ಟೀಕಿಸಿದ ಸಿ.ಎಂ ಇಬ್ರಾಹಿಂ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ಗುಣಗಾನ ಮಾಡಿದರು ತಮ್ಮ ಭಾಷಣದ ಮಧ್ಯ ವಾಜಪೇಯಿ ಅವರನ್ನು ನೆನೆದ ಇಬ್ರಾಹಿಂ ವಾಜಪೇಯಿ ಒಬ್ಬ ಅಪ್ರತಿಮ ನಾಯಕ . ಎಲ್ಲರನ್ನು ಒಗ್ಗೂಡಿಸಿಕೊಂಡು ತಮ್ಮ ಜೋತೆ ಕರೆದುಕೊಂಡು ಹೋಗುವ ಒಳ್ಳೆಯ ಗುಣವುಳ ನಾಯಕ ಅವರಾಗಿದ್ದರು ಪಕ್ಷವನ್ನು ಮೀರಿ ಬೆಳೆದ ನಾಯಕ ವಾಜಪೇಯಿ ರಾಗಿದ್ದರು ಎಂದು ವಾಜಪೇಯಿ ಅವರ ಗುಣಗಾನ ಮಾಡಿದರಲ್ಲದೆ ಸಂವಿಧಾನ ಉಳಿಯ ಬೇಕಾದರೇ ಎಲ್ಲರೂ ಕಾಂಗ್ರೇಸ ಪಕ್ಷವನ್ನು ಬೆಂಬಲಿಸಿಬೇಕೆಂದು ಇಬ್ರಾಹಿಂ ಮನವಿ ಮಾಡಿದರು
ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ , ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ , ಶಾಮ ಘಾಟಗೆ , ಸುಭಾಸ ಭಾನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು