RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಎಲ್ಲ ಜನಾಂಗಗಳ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೇಸ ಪಕ್ಷಕ್ಕೆ ನಿಮ್ಮ ಮತನೀಡಿ : ಧುರೀಣ ಲಖನ ಮನವಿ

ಗೋಕಾಕ:ಎಲ್ಲ ಜನಾಂಗಗಳ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೇಸ ಪಕ್ಷಕ್ಕೆ ನಿಮ್ಮ ಮತನೀಡಿ : ಧುರೀಣ ಲಖನ ಮನವಿ 

ತಾಲೂಕಿನ ಮಾಲದಿನ್ನಿ ಗ್ರಾಮದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಕಾಂಗ್ರೇಸ್ ಧುರೀಣ ಲಖನ ಜಾರಕಿಹೊಳಿ ಪಾದಯಾತ್ರೆಯ ಮೂಲಕ ಮತ ಯಾಚಿಸುತ್ತಿರುವುದು.

ಎಲ್ಲ ಜನಾಂಗಗಳ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೇಸ ಪಕ್ಷಕ್ಕೆ ನಿಮ್ಮ ಮತನೀಡಿ : ಧುರೀಣ ಲಖನ ಮನವಿ

ಗೋಕಾಕ ಏ, 9 :- ಎಲ್ಲ ಜನಾಂಗಗಳ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೇಸ್, ಅಭಿವೃದ್ದಿಯ ಮೂಲಮಂತ್ರದೊಂದಿಗೆ ಜನಸೇವೆಯನ್ನು ಮಾಡುತ್ತಿದೆ ಎಂದು ಕಾಂಗ್ರೇಸ್ ಧುರೀಣ ಲಖನ ಜಾರಕಿಹೊಳಿ ಹೇಳಿದರು.
ಬುಧವಾರದಂದು ಗೋಕಾಕ ಮತಕ್ಷೇತ್ರದ ಮಾಲದಿನ್ನಿ, ಉಪ್ಪಾರಹಟ್ಟಿ, ಮಮದಾಪೂರ, ಅಜ್ಜನಕಟ್ಟಿ, ಮರಡಿ-ಶಿವಾಪೂರ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತ ಯಾಚಿಸಿ ಮಾತನಾಡಿದ ಅವರು, ಬಡವರ, ದೀನದಲಿತರ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ದಿಗೆ ಸಾಮಾಜಿಕ ನ್ಯಾಯದೊಂದಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಧುರೀಣ ಸಂತೋಷ ಜಾರಕಿಹೊಳಿ, ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಮುಖಂಡರಾದ ಯಲ್ಲಪ್ಪ ನಂದಿ, ಯಲ್ಲಪ್ಪ ಬಂಗೆನ್ನವರ, ಸಿದ್ದಪ್ಪ ಬಂಡಿ, ಮುತ್ತೆಪ್ಪ ಖಾನಪ್ಪನವರ, ಕುಮಾರ ಕಂಬಾರ, ಪರಸಪ್ಪ ಚೂನನ್ನವರ, ಯಲ್ಲಪ್ಪ ಬೂದಿಗೊಪ್ಪ, ಹಣಮಂತ ದುರ್ಗನ್ನವರ, ನಾಮದೇವ ಜಕಬಾಳ, ಶಂಕರಗೌಡ ಪಾಟೀಲ, ಗಿರೀಶಗೌಡ ಪಾಟೀಲ, ಈರಪ್ಪ ಜನ್ಮಟ್ಟಿ, ಸಿದ್ದಪ್ಪ ಕಮತ, ಹಣಮಂತ ಗೋಪಾಳಿ, ಶಿವಲಿಂಗ ಜಕ್ಕನವರ, ಮುತ್ತೆಪ್ಪ ಜಕ್ಕನವರ ಸೇರಿದಂತೆ ಅನೇಕರು ಇದ್ದರು.

Related posts: