ಗೋಕಾಕ:ಸಾಧನೆಯ ಶಿಖರ ವೇರಿದ ಗೋಕಾಕ ಶೈಕ್ಷಣಿಕ ವಲಯ
ಸಾಧನೆಯ ಶಿಖರ ವೇರಿದ ಗೋಕಾಕ ಶೈಕ್ಷಣಿಕ ವಲಯ
ವಿಶೇಷ ವರದಿ :
ಗೋಕಾಕ ಮೇ 10 : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ ವಲಯವು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇಯ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿ ಸಾಧನೆಯ ಶಿಖರವೇರಿದೆ .
ಕಳೆದ ವರ್ಷದ ಎಸ ಎಸ ಎಲ್ ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ವಲಯ ಮೊದಲನೇಯ ಸ್ಥಾನ ಪಡೆದರೆ ಗೋಕಾಕ ಶೈಕ್ಷಣಿಕ ವಲಯ ದ್ವಿತೀಯ ಸ್ಥಾನವನ್ನು ತನ್ನದಾಗಿಸಿತ್ತು ಆದರೆ ಈ ವರ್ಷ ಆ ಸಾಧನೆಯನ್ನು ಮೀರಿ ರಾಜ್ಯದಲ್ಲೇ ಮೊದಲನೇಯ ಸ್ಥಾನ ಪಡೆದು ಎಲ್ಲರನ್ನು ತಮ್ಮತ್ತ ಕೇಂದ್ರಿಕರಿಸಿದೆ .
ಪ್ರಸಕ್ತ ಸಾಲಿನಲ್ಲಿ ಎಸ ಎಸ ಎಲ್ ಸಿ ಪರೀಕ್ಷೆ ಬರೆದ 2144 ರಲ್ಲಿ 1990 ವಿದ್ಯಾರ್ಥಿಗಳು ತೆರ್ಗಡೆಯಾದರೆ, ಪರೀಕ್ಷೆ ಬರೆದ 1818 ವಿದ್ಯಾರ್ಥಿನೀಯರಲ್ಲಿ 1762 ವಿದ್ಯಾರ್ಥಿನೀಯರು ತೆರ್ಗಡೆಯಾಗಿದ್ದಾರೆ . ಒಟ್ಟು 3962 ವಿದ್ಯಾರ್ಥಿಗಳಲ್ಲಿ 3752 ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇಕಡಾ 94.7 ರಷ್ಟು ಫಲಿತಾಂಶ ಪಡೆಯುವ ಮೂಲಕ ದಾಖಲೆಯನ್ನು ಬರೆದಿದ್ದಾರೆ .
ಮೇಲುಗೈ ಸಾಧಿಸಿದ ವನಿತೆಯರು : ಗೋಕಾಕ ವಲಯ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸ ಆಗುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಸಾಭಿತು ಪಡೆಸಿದ್ದಾರೆ ಅಂತಿಮ ಪರೀಕ್ಷೆಗೆ ಹಾಜರಾದ ಒಟ್ಟು 1818 ಸಂಖ್ಯೆಯ ಪೈಕಿ 1762 (ಶೇ 96.92) ವಿದ್ಯಾರ್ಥಿನೀಯರು ತೆರ್ಗಡೆಯಾಗಿ ದಾಖಲೆ ಬರೆದಿದ್ದಾರೆ
ಕಳೆದ ತಿಂಗಳು ಜರುಗಿದ sslc ಪರೀಕ್ಷೆಯಲ್ಲಿ ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ . ಗೋಕಾಕ ವಲಯದಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಶಿಕ್ಷಕರ ವೈಯಕ್ತಿಕ ಕಾಳಜಿಯಿಂದ ಹಲವಾರು ಕ್ರೀಯಾತ್ಮಕ ಚಟುವಟಿಕೆಗಳನ್ನು ಹಮ್ಮಕೋಳ್ಳುವ ಮುಖೇನ ವಿದ್ಯಾರ್ಥಿಗಳಲ್ಲಿ ಒದಿನ ಆಸಕ್ತಿ ಹೆಚ್ಚಿಸಿ , ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ದಗೋಳಿಸುವ ಕಾರ್ಯಮಾಡಿದ್ದರ ಪರಿಣಾಮ ಗೋಕಾಕ ವಲಯ ಇಂದು ರಾಜ್ಯದಲ್ಲಿ ಪ್ರಥಮಸ್ಥಾನ ಗಿಟ್ಟಿಸಲು ಸಾಧ್ಯವಾಗಿದೆ
ಗುರುಜೀ ಬಂದರು ಗುರವಾರ : ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಎಲ್ಲ ವಿಷಯದ ಶಿಕ್ಷಕರು ಗುಂಪು ಗುಂಪಾಗಿ ಪ್ರತಿ ಗುರುವಾರದಂದು ‘ ಗುರುಜೀ ಬಂದರು ಗುರುವಾರ ‘ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಒದುವ ,ಬರೆಯುವ ಹವ್ಯಾಸ ಬೆಳಿಸಿ ಯಾವ ವಿಷಯದಲ್ಲಿ ವಿದ್ಯಾರ್ಥಿ ಹಿಂದೆ ಉಳಿದಿದ್ದಾನೆ ಎಂಬುದನ್ನು ಗುರುತಿಸಿ ಆ ವಿಷಯದ ಬಗ್ಗೆ ವಿಷಯ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಯನ್ನು ತಯಾರಿಗೋಳಿಸಿದ್ದು ಈ ಕಾರ್ಯಕ್ರಮದ ವಿಶೇಷ
ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ : ರಾಜ್ಯದಲ್ಲಿ ಗೋಕಾಕ ಶೈಕ್ಷಣಿಕ ವಲಯ ಪ್ರಥಮಸ್ಥಾನ ಪಡೆಯಲು ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರತಿದಿನ ಸಾಯಂಕಾಲ 6 ರಿಂದ 8 ಘಂಟೆಯ ವರೆಗೆ ಎಲ್ಲ ವಿಷಯ ಶಿಕ್ಷಕರನ್ನು ಒಂದು ಕಡೆ ಸೇರಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣದಲ್ಲಿ ಸ್ವಂದಿಸುವ ಕಾರ್ಯವನ್ನು ಪರೀಕ್ಷೆ ಪ್ರಾರಂಭದ ತಿಂಗಳ ಮೊದಲೇ ನಡೆಯಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಸಿದ್ದಗೊಳಿಸಿದ್ದ ರೀತಿಯನ್ನು ಮೆಚ್ಚಿ ಹಲವು ಶೈಕ್ಷಣಿಕ ವಲಯಗಳು ಈ ಕಾರ್ಯಕ್ರಮವನ್ನು ಅನುಸರಿಸಿದ್ದು ಇಲ್ಲಿ ಉಲ್ಲೇರ್ಖಾಹ
ಪಿಕನಿಕ್ ಫಜಲ್ , ದಿನಕೊಂದು ವಿಜ್ಞಾನ ಚಿತ್ರ , ನಕ್ಷಾ ಸಪ್ತಾಹ , ಪತ್ರ ಚಳುವಳಿ , ಪ್ರವಾಸ ಅಧ್ಯಯನ , ವಾರ್ಷಿಕ ಪರೀಕ್ಷೆಯ ರೀತಿಯಲ್ಲಿಯೇ ಸರಣಿ ಪರೀಕ್ಷೆಗಳು ಸೇರಿದಂತೆ ಅನೇಕ ಕ್ರೀಯಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಭದ್ರಗೋಳಿಸಿರುವುದರಿಂದ ಇಂದು ಗೋಕಾಕ ವಲಯ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಲು ಸಾಧ್ಯವಾಗಿದೆ
ಗೋಕಾಕ ವಲಯದ ವಿದ್ಯಾರ್ಥಿಗಳು ಈ ಸಾಧನೆಗೆ ಸಚಿವ ರಮೇಶ ಜಾರಕಿಹೊಳಿ , ಜಿಲ್ಲಾ ಬಿಸಿಯೂಟ ಅಧಿಕಾರಿ ಜಿ.ಬಿ.ಬಳಗಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ