RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ನಾಳೆ ಮತದಾನ : ತಾಲೂಕಿನಾದ್ಯಂತ ಬೀಗಿ ಭದ್ರತೆ ಒಟ್ಟು 1424 ಸಿಬ್ಬಂದಿಗಳ ನೇಮಕ

ಗೋಕಾಕ:ನಾಳೆ ಮತದಾನ : ತಾಲೂಕಿನಾದ್ಯಂತ ಬೀಗಿ ಭದ್ರತೆ ಒಟ್ಟು 1424 ಸಿಬ್ಬಂದಿಗಳ ನೇಮಕ 

ನಾಳೆ ಮತದಾನ : ತಾಲೂಕಿನಾದ್ಯಂತ ಬೀಗಿ ಭದ್ರತೆ ಒಟ್ಟು 1424 ಸಿಬ್ಬಂದಿಗಳ ನೇಮಕ
ಗೋಕಾಕ ಮೇ 11 : ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರಗಳಲ್ಲಿ ಬೀಗಿ ಭದ್ರತೆ ಕೈಗೋಳಲಿಗಿದ್ದು , ಒಟ್ಟು 1424 ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಗೋಕಾಕ ಡಿವಾಯ್ಎಸಪಿ ಪ್ರಭು ಡಿ.ಟಿ ತಿಳಿಸಿದ್ದಾರೆ

ಮತಕ್ಷೇತ್ರದಾದ್ಯಂತ ಒಟ್ಟು 1424 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು , ಕೆಎಸ್ಆರಪಿ , ಸಿ ಆರ್ ಪಿ ಎಫ್ , ಸಿವಿಲ್ ಪೊಲೀಸ ಪಡೆ ಭದ್ರತೆಗೆ ಬಳಸಿಕೋಳ್ಳಲಾಗಿದೆ .

ಗೋಕಾಕ ಮತಕ್ಷೇತ್ರಕ್ಕೆ 3 ಪ್ಯಾರಾ ಮಿಲಿಟರಿ ಪಡೆ , 2 ಸಿಆರಪಿಎಫ್ ತುಕ್ಕಡಿ , 1 ಐಟಿಬಿಪಿ ತುಕ್ಕಡಿ ಸೇರಿದಂತೆ ಒಟ್ಟು 270 ಸಿಬ್ಬಂದಿಗಳು.

ಒಬ್ಬರು ಡಿವಾಯ್ಎಸಪಿ , 4 ಜನ ಸಿಪಿಐ , 3 ಜನ ಪಿಎಸ್ಐ , 13 ಜನ ಎಎಸ್ಐ ಸೇರಿದಂತೆ ಒಟ್ಟು 572 ಪೊಲೀಸ ಸಿಬ್ಬಂದಿಗಳನ್ನು ಗೋಕಾಕ ಮತಕ್ಷೇತ್ರಕ್ಕೆ ನಿಯೋಜಿಸಲಾಗಿದೆ

ಅರಬಾಂವಿ ಮತಕ್ಷೇತ್ರಕ್ಕೆ 3 ಪ್ಯಾರಾ ಮಿಲಿಟರಿ ಪಡೆ , 1 ಸಿಆರಪಿಎಫ್ ತುಕ್ಕಡಿ , 1 ಸಿಐಎಸ್ಎಫ್ ತುಕ್ಕಡಿ , 1 ಗುಜರಾತ್ ಪೊಲೀಸ ತುಕ್ಕಡಿ , ಸೇರಿದಂತೆ ಒಟ್ಟು 240 ಸಿಬ್ಬಂದಿಗಳು .

ಒಬ್ಬರು ಡಿವಾಯ್ಎಸಪಿ , 4 ಜನ ಸಿಪಿಐ , 5 ಜನ ಪಿಎಸ್ಐ , 11 ಜನ ಎಎಸ್ಐ , 71 ಜನ ಮುಖ್ಯ ಪೇದೆ ಸೇರಿದಂತೆ ಒಟ್ಟು 342 ಪೊಲೀಸ ಸಿಬ್ಬಂದಿಗಳನ್ನು ಅರಬಾಂವಿ ಮತಕ್ಷೇತ್ರಕ್ಕೆ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಡಿವಾಯ್ಎಸಪಿ ಪ್ರಭು ಡಿ.ಟಿ ತಿಳಿಸಿದ್ದಾರೆ

Related posts: