ಗೋಕಾಕ: ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ: ಗೋಕಾಕಿನಲ್ಲಿ ಜರುಗಿದ ದಲಿತೋತ್ಸವದಲ್ಲಿ ನಿಜಗುಣಾನಂದ ಶ್ರೀ ಅಭಿಮತ
ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ: ಗೋಕಾಕಿನಲ್ಲಿ ಜರುಗಿದ ದಲಿತೋತ್ಸವದಲ್ಲಿ ನಿಜಗುಣಾನಂದ ಶ್ರೀ ಅಭಿಮತ
ಗೋಕಾಕ ಮೇ 27: ವೈದ್ದಿಕ ಸಂಪ್ರದಾಯದಲ್ಲಿ ಹುಟ್ಟಿ ,ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಬೆಳೆದು ಕೋನೆಗೆ ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ ಎಂದು ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು
ಅವರು ಶನಿವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾಣಿ ಗೋಕಾಕಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸ್ವಾಭಿಮಾನ ದಲಿತೋತ್ಸವ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು
ಮೂಲ ವರ್ಣಾಶ್ರಮದ ದಲಿತರು , ಪ್ರಗತಿಪರ ವೈಚಾರಿಕ ದಲಿತರು ,ಅಧಿಕಾರದ ಆಸೆಗೋಸ್ಕರ ಕೇಸರಿಕರಣವಾಗುತ್ತಿರುವ ದಲಿತರು , ಮೀಸಲಾತಿ ಹಿಂದೆ ಬಿದ್ದ ದಲಿತರು ಮೊದಲು ಒಂದಾಗ ಬೇಕಾಗಿದೆ
ಸಂಪ್ರದಾಯ ಧರ್ಮದ ವಿರುದ್ಧ ದಲಿತರು ಎದ್ದು ಹೋರಾಟ ಮಾಡಿದಾಗ ಮಾತ್ರ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗಲು ಸಾದ್ಯ ಆ ದೀಸೆಯಲ್ಲಿ ಎಲ್ಲ ಅಂಬೇಡ್ಕರವಾದದ ದಲಿತಪರ ಸಂಘಟನೆಗಳು ಒಂದಾಗಿ ಸಮುದಾಯ ಕಟ್ಟಲು ಮುಂದಾಗಬೇಕಾಗಿದೆ
ಶಂಕರಾಚಾರ್ಯ,ಮದ್ವಾಚಾರ್ಯ,ರಾಮಾನುಜಚಾರ್ಯ ರಿಂದ ದೇಶ ಉದ್ದಾರವಾಗಿಲ್ಲಾ ಬಾಬಾಸಾಹೇಬ ಅಂಬೇಡ್ಕರ ರಿಂದ ದೇಶ ಉದ್ದಾರವಾಗಿದೆ ಎಂಬ ಸತ್ಯವನ್ನು ಅರಿತು ಬದಲಾವಣೆಯಾಗಿ ನಮ್ಮ ಹೋರಾಟಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿನ ಆಯುಷ್ಮಾನ ಭಂತೇ ಮಾತಾ ಮೈತ್ರಿಯಾ , ಶೂನ್ಯ ಸಂಪಾದನಾ ಮಠದ ಶ್ರೀ ಮ.ನಿ.ಪ್ರ ಮುರಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೊಳೆ , ನಗರ ಸಭೆ ಅದ್ಯಕ್ಷ ತಳದಪ್ಪಾ ಅಮ್ಮಣಗಿ , ನಗರಸಭೆ ಸದಸ್ಯರಾದ ಎಸ್.ಎ.ಕೋತವಾಲ, ಪರಶುರಾಮ ಭಗತ , ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೋ: ಬಸವರಾಜ ಚಲವಾದಿ , ಡಾ. ಎಮ್.ಬಿ.ಕೃಷ್ಣಮೂರ್ತಿ, ವೇದಿಕೆ ರಾಜ್ಯಾದ್ಯಕ್ಷ ಬಸವರಾಜ ದೊಡಮನಿ ಉಪಾಧ್ಯಕ್ಷ ರಮೇಶ ಕಳ್ಳಿಮನಿ ಸೆರಿದಂತೆ ಅನೇಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ ವಂದಿಸಿದರು