RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ!

ಗೋಕಾಕ:ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ! 

ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ!
ಗೋಕಾಕ  ಮೇ 13 : ಚುನಾವಣೆ ಮುಗಿಯುತ್ತಿದ್ದಂತೆ ಮಾಜಿ ಸಚಿವ ಸತೀಶ ಜಾರಕಿಹೊಳಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ . ಸತೀಶ ಇಂದು ರಾಜಕೀಯ ಜಂಜಾಟ ಮರೆತು ಮುಂಜಾನೆ ಗೋಕಾಕಿನಲ್ಲಿ ಆಪ್ತರೊಂದಿಗೆ ಸಮಾಲೋಚನೆ ಮಾಡಿ , ಮದುವೆ ಸಮಾರಂಭ ಒಂದರಲ್ಲಿ ಭಾಗವಹಿಸಿ ಬೆಳಗಾವಿಯಲ್ಲಿರುವ ತಮ್ಮ ಕುಟುಂಬ ಸದಸ್ಯರೊಂದಿಗೆ ರಿಲ್ಯಾಕ್ಸ್ ಮೂಡನಲ್ಲಿದಾರೆ 

ಜಿಲ್ಲೆಯಾದ್ಯಂತ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್‌ ಜಾರಕಿಹೊಳಿ ಅವರು ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರ ಎಂಬ ಲೆಕ್ಕಚಾರ ಶುರುವಾಗಿದೆ.

ಚುನಾವಣೆಗೆ ಸ್ಫರ್ಧಿಸಿದ ನಂತರ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ. ತಾವು ಕಳೆದ 10 ವರ್ಷದಿಂದ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳೇ ತಮ್ಮ ಗೆಲವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಿಂದ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿಲ್ಲ. ಇದೀಗ ಪ್ರಚಾರವಿಲ್ಲದೆ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸತೀಶ್‌ ಜಾರಕಿಹೊಳಿ ಅವರ ಪರವಾಗಿ ಅಲ್ಲಿನ ಕಾರ್ಯಕರ್ತರೇ ಪ್ರಚಾರ ಕೈಗೊಂಡಿದ್ದರು. ಬಿಜೆಪಿ ಇದರ ಸದುಪಯೋಗ ಪಡಿಸಿಕೊಳ್ಳಲು, ವಿವಿಧ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಪರವಾಗಿ ಪ್ರಚಾರ ಕೈಗೊಂಡಿದ್ದರು.

ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆಯಷ್ಟೆ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಇದೀಗ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದ್ದ ಜಿಲ್ಲೆಯ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ , ಬಿಜೆಪಿ ಗೆಲ್ಲುತ್ತೆ ಎಂದು ಎರಡು ಪಕ್ಷಗಳ ಪರ ಮತ್ತು ವಿರುದ್ಧವಾಗಿ ಲಕ್ಷಾಂತರ ರೂ.ಗಳ ಬೆಟ್ಟಿಂಗ್‌‌ ಕಟ್ಟುತ್ತಿದ್ದಾರೆ.

ಇನ್ನು ಮದಗಜಗಳ ಕಾದಾಟವಾದ ಹುಕ್ಕೇರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮೇಶ್‌‌ ಕತ್ತಿ ಹಾಗೂ ಕಾಂಗ್ರೆಸ್‌‌ನ ಹಿರಿಯ ರಾಜಕಾರಣಿ ಎ.ಬಿ.ಪಾಟೀಲ ಗೆಲ್ಲುತ್ತಾರಾ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಸಂಬಂಧ ಫಲಿತಾಂಶಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಬಾಜಿ ಕಟ್ಟುವ ದಂಧೆ ಜೋರಾಗಿ ಸಾಗಿದೆ. 

ಇನ್ನು ಗೋಕಾಕ ಮತಕ್ಷೇತ್ರದಲ್ಲಿ ಈ ಬಾರಿ ಗೆಲುವಿನ ಮಾಲೆ ಯಾರ ಕೋರಳಿಗೆ ಬೀಳಲಿದೆ ಎಂಬ ಗುಮಾನಿಗಳು ಜೋರಾಗಿಯೇ ನಡೆದಿವೆ . ನಿನ್ನೆ ನಡೆದ ಮತದಾನ ಪ್ರಕ್ರೀಯೆಯಲ್ಲಿ ಒಟ್ಟು 1,69,706 ಮತದಾರರು ಮತಗಟ್ಟೆಗಳಲ್ಲಿ ಬಂದು ತಮ್ಮ ಮತ ಚಲಾಯಿಸಿದ್ದು , ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರತಿಸ್ಪರ್ಧಿ ಬಿಜೆಪಿಯ ಅಶೋಕ ಪೂಜಾರಿ ವಿರುದ್ಧ ಸುಮಾರು 41 ಸಾವಿರದಷ್ಟು ಅಂತರದಿಂದ ಗೆಲುವು ಸಾಧಿಸುತ್ತಾರೆಂದು ಭಾಜಿ ಜೋರಾಗಿಗೆ ನಡೆದಿದೆ ಗೋಕಾಕ ಮತಕ್ಷೇತ್ರ ಜನ ಈ ಬಾರಿಯ ಫಲಿತಾಂಶವನ್ನು ಭಾರಿ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ

Related posts: