ಗೋಕಾಕ:ಗೆಲುವಿನ ಯಾತ್ರೆಯನ್ನು ಮುಂದುವರೆಸಿದ ಜಾರಕಿಹೊಳಿ ಸಹೋದರರು
ಗೆಲುವಿನ ಯಾತ್ರೆಯನ್ನು ಮುಂದುವರೆಸಿದ ಜಾರಕಿಹೊಳಿ ಸಹೋದರರು
ವಿಶೇಷ ವರದಿ:
ಗೋಕಾಕ ಮೇ 15 : ಜಾರಕಿಹೊಳಿ ಕುಟುಂಬದ ಮೂವರೂ ಸಹೋದರರು ಗೆಲುವು ಸಾಧಿಸುವ ಮೂಲಕ ಜಯದ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಗೋಕಾಕ ಕ್ಷೇತ್ರದಿಂದ ಸಚಿವ ರಮೇಶ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಹಾಗೂ ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ನಿಂದ ಐದನೇ ಬಾರಿಗೆ ರಮೇಶ ಜಾರಕಿಹೊಳಿ, ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ ಮೂರನೇ ಗೆಲುವು ಪಡೆದಿದ್ದಾರೆ.
ಇದರಿಂದ ರಾಜ್ಯದಲ್ಲಿ ಜಾರಕಿಹೊಳಿ ಖದರ್ ಮತ್ತೊಮ್ಮೆ ಸಾಬಿತಾಗಿದ್ದು , ರಾಜ್ಯ ರಾಜಕಾರಣದಲ್ಲಿ ಮತ್ತೆ ತಮ್ಮ ಪ್ರಭಾವನ್ನು ಬಿರಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಾರಕಿಹೊಳಿ ಸಹೋದರರು ತಮ್ಮ ಗೆಲುವಿಗೆ ಹಗಳಿರುಳು ಶ್ರಮಿಸಿದ ಮತದಾರ ಪ್ರಭುಗಳಿಗೆ ,ಕಾರ್ಯಕರ್ತರಿಗೆ , ಆಪ್ತರಿಗೆ ಸೇರಿದಂತೆ ಸಕಲ ಜನಸ್ತೋಮಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ