ಗೋಕಾಕ:ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು
ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು
ವಿಶೇಷ ವರದಿ:
ಗೋಕಾಕ ಮೇ 16 : ಭಾರಿ ಕುತೂಹಲ ಕೇರಳಿಸಿದ್ಧ ಈ ಸಾರಿ ವಿಧಾನಸಭಾ ಚುನಾವಣೆ ಎಲ್ಲರ ಲೇಕ್ಕಾಚಾರ ತೆಲೆಕೆಳಗಾಗಿಸಿದೆ ಇದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯೂ ಹೊರತಾಗಿಲ್ಲ
ಜಿಲ್ಲೆಯಲ್ಲಿ ಕುದಲಲೇಳೆ ಅಂತರದಿಂದ ಗೆಲ್ಲುತ್ತಾರೆ ಎಂದು ಊಹಿಸಲಾಗಿದ್ದ ಅಭ್ಯರ್ಥಿಗಳೇ ಈ ಸಾರಿಯ ಚುನಾವಣೆಯಲ್ಲಿ ಭಾರಿ ಅಂತದಿಂದ ಗೆದ್ದು ಬಂದು ಎಲ್ಲರ ಹುಬ್ಬೇರಿಸಿದ್ದಾರೆ
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹುರಿಯಾಳು ಶಾಸಕ ಅಭಯ ಪಾಟೀಲ ತನ್ನ ಪ್ರತಿಸ್ವರ್ಧಿ ಕಾಂಗ್ರೇಸ ನ ಎಂ ಡಿ ಲಕ್ಷ್ಮೀ ನಾರಾಯಣ ಅವರನ್ನು 58,692 ಮತಗಳ ಭಾರಿ ಅಂತರದಿಂದ ಸೋಲಿಸಿ ಜಿಲ್ಲೆಯಲ್ಲಿ ಮೊದಲ ಸ್ದಾನದಲ್ಲಿದ್ದರೆ , ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೈ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸಂಜಯ ಪಾಟೀಲರನ್ನು 51,724 ಮತಗಳ ಭಾರಿ ಅಂತರದಿಂದ ಸೋಲಿನ ರುಚಿ ಕಾಣಿಸಿ ಎರಡನೇಯ ಸ್ಥಾನದಲ್ಲಿದ್ದಾರೆ .
ಅಲ್ಲದೇ ಭಾರಿ ತುರುಸಿನ ಸ್ವರ್ಧೆ ಒಡ್ಡಿ ಅರಬಾಂವಿ ಕ್ಷೇತ್ರಾದ್ಯಂತ ಊಹಾಪೋಹಗಳನ್ನು ಎಬ್ಬಿಸಿದ ಜೆಡಿಎಸ ನ ಭಿಮಪ್ಪ ಗಡಾದಿ ಅವರನ್ನು ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಅವರು 47,328 ಗಳ ಭಾರಿ ಅಂತರದಿಂದ ಸೋಲಿಸಿ ವಿರೋಧಿಗಳ ಲೆಕ್ಕಾಚಾರವನ್ನು ತೆಲೆಕೆಳಗಾಗಿಸಿ ಐದನೇಯ ಬಾರಿ ವಿಧಾನಸಭಾಗೆ ಪ್ರವೇಶ ಪಡೆದು ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡೆಸಿದ್ದಾರೆ