ಗೋಕಾಕ:ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ
ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ
ವಿಶೇಷ ವರದಿ :
ಗೋಕಾಕ ಮೇ 16 : ಈ ಬಾರಿ ಗೋಕಾಕ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆದ್ದೆ ತಿರುತ್ತೆನೆಂಬ ಆತ್ಮವಿಶ್ವಾಸ ದಿಂದ ಕಣಕ್ಕಿಳಿದ್ದು ತೀವ್ರ ಪೈಪೋಟಿ ಒಡ್ಡಿದ ಬಿಜೆಪಿಯ ಹುರಿಯಾಳು ಅಶೋಕ ಪೂಜಾರಿ ಅವರಿಗೆ ಈ ಭಾರಿಯ ಚುನಾವಣೆ ಹ್ಯಾಟ್ರಿಕ್ ಸೋಲಿನ ಅನುಭವ ನೀಡಿದೆ
2008, 2013 ರಲ್ಲಿ ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಸೋತ್ತಿದ್ದ ಅಶೋಕ ಪೂಜಾರಿ ಅವರು ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೇರಿ ಗೆಲ್ಲುವ ವಿಸ್ವಾಸದಿಂದ ಕಣದಲ್ಲಿ ಇಳಿದ ಅಶೋಕ ಪೂಜಾರಿ ಅವರ ಪರವಾಗಿ ಬಿಜೆಪಿಯ ಘಟಾನುಘಟ್ಟಿ ನಾಯಕರನ್ನು ಗೋಕಾಕಕ್ಕೆ ಕರೆಯಿಸಿ ಪ್ರಚಾರ ಮಾಡಿದ್ದರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಸಂದ ಸುರೇಶ ಅಂಗಡಿ , ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಅಶೋಕ ಪೂಜಾರಿ ಪರ ಪ್ರಚಾರ ನಡೆಯಿಸಿದ್ದು ಇಲ್ಲಿ ಸ್ಮರಣೀಯ
ಇಷ್ಷೇಲ್ಲಾ ಕಸರತ್ತು ನಡೆಯಿಸಿದ ಬಿಜೆಪಿಯ ಪೂಜಾರಿಗೆ ಈ ಭಾರಿ ಮತಗಳಿಕೆಯ ಪ್ರಮಾಣ ಹೆಚ್ಚಿಸಿಕೊಂಡರು ಸಹ ಅದೃಷ್ಟ ಲಕ್ಷ್ಮೀ ಮತ್ತೆ ಕೈಕೊಟ್ಟು ಸತತ ಹ್ಯಾಟ್ರಿಕ್ ಸೋಲಿನ ರುಜಿ ಉಣ್ಣಬಡಿಸಿದ್ದಾಳೆ
ಇತ್ತ ಸತತ ಐದನೇಯ ಭಾರಿ ವಿಧಾನಸಭೆಯನ್ನು ಪ್ರವೇಶಿಸಿರುವ ರಮೇಶ ಜಾರಕಿಹೊಳಿ ಮಾತ್ರ ತಮ್ಮ ಕ್ಷೇತ್ರಕ್ಕೆ ಯಾವ ಪ್ರಭಾವಿ ನಾಯಕರನ್ನು ಕರೆಯಿಸದೆ ತಮ್ಮ ಬೆಂಬಲಿಗರ , ಆಪ್ತರ , ಹಾಗೂ ಅಫಾರ ಕಾರ್ಯಕರ್ತರ ಮತ್ತು ಕುಟುಂಬ ವರ್ಗದ ಪ್ರಯತ್ನದಿಂದ ಸುಮಾರು 14, 284 ಮತಗಳ ಅಂತರದಿಂದ ಗೆದ್ದು ಗೆಲುವಿನ ನಗೆ ಬೀರಿದ್ದಾರೆ