ಗೋಕಾಕ:ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ
ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ
ಬೆಟಗೇರಿ ಮೇ 17 : ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಗುರುವಾರ ಮೇ.17 ರಂದು ಬೆಳಗ್ಗೆ 9.30 ಗಂಟೆಗೆ ಪ್ರಮಾಣ ವಚನ ಸ್ವೀಕರಿದ ಪ್ರಯುಕ್ತ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದ ಬಿಜೆಪಿ ಮುಖಂಡ ಈಶ್ವರ ಬಳಿಗಾರ ನೇತೃತ್ವದಲ್ಲಿ ಸ್ಥಳೀಯ ಶ್ರೀ ಬಸವ ಅಭಿಮಾನಿ ಬಳಗ ಹಾಗೂ ಅರಭಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಹುಮತಗಳ ಅಂತರದಿಂದ ಗೇಲವು ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಒಬ್ಬರಿಗೊಬ್ಬರೂ ಸಿಹಿ ವಿತರಿಸಿ, ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ ವಿಜಯ್ಯೋತ್ಸವ ಆಚರಿಸಿದರು.
ಗ್ರಾಮದ ವಿವಿಧಡೆ ಪಾದಯಾತ್ರೆ ಮೂಲಕ ಜೈ ಘೋಷ ಹಾಕುತ್ತಾ ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ಹೂ ಮಾಲೆ ಹಾಕಿ, ಪೂಜೆ ಸಲ್ಲಿಸಿ, ಜೈ ಘೋಷ ಕೂಗಿ ಸಂಭ್ರಮಸಿದರು.
ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಮಲ್ಲಪ್ಪ ಪಣದಿ, ಈರಪ್ಪ ದೇಯಣ್ಣವರ, ಶ್ರೀಧರ ದೇಯಣ್ಣವರ, ರಾಮಣ್ಣ ನೀಲಣ್ಣವರ, ಮಲ್ಲಿಕಾರ್ಜುನ ಮೆಳೆಣ್ಣವರ, ಚಂದ್ರಪ್ಪ ಕಂಬಿ, ವೀರಸಂಗಪ್ಪ ದೇಯಣ್ಣವರ, ಮಾಯಪ್ಪ ಬಾಣಸಿ, ಗೌಡಪ್ಪ ದೇಯಣ್ಣವರ, ಮಲ್ಲಪ್ಪ ಕಂಬಿ, ಗೌಡಪ್ಪ ಮೇಳೆಣ್ಣವರ, ಮುತ್ತೆಪ್ಪ ಕುರುಬರ, ಸ್ಥಳೀಯ ಬಸವ ಅಭಿಮಾನಿ ಬಳಗ, ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸೇರಿದಂತೆ ಇತರರು ಇದ್ದರು.