RNI NO. KARKAN/2006/27779|Saturday, December 28, 2024
You are here: Home » breaking news » ಗೋಕಾಕ:ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ

ಗೋಕಾಕ:ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ 

ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ

ವಿಶೇಷ ವರದಿ :

ಗೋಕಾಕ ಮೇ 21 : ಇನ್ನು ಮೂರನಾಲ್ಕು ದಿನಗಳಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಜಾರಕಿಹೊಳಿ ಸಹೋದರರ ಪೈಕಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೆಡಿಎಸ ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ

ಕಳೆದ 5 ವರ್ಷಗಳ ಕಾಲ ಸತೀಶ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಹಿಸಿ ಮಂತ್ರಿ ಸ್ಥಾನವನು ಸರ್ಮಥವಾಗಿ ನಿಭಾಯಿಸಿ , ರಾಜ್ಯಮಟ್ಟದಲ್ಲಿ ಸೈ ಎಣಿಸಿಕೊಂಡಿದ್ದಾರೆ

ಹಿಂದೆ ಇದ್ದ ಜೆಡಿಎಸ್ ಮತ್ತು ಕೈ ದೋಸ್ತಿ ಸರಕಾರದಲ್ಲಿ ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ , ಸತೀಶ ಜಾರಕಿಹೊಳಿ ಅವರಿಗೆ ಈ ಬಾರಿಯೂ ಮಂತ್ರಿ ಸ್ಥಾನ ದೊರೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದ್ದು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯು ಸಹ ಅವರಿಗೆ ಲಭ್ಯವಾಗಲಿದೆ ಎಂದು ಕಾಂಗ್ರೇಸ ಮೂಲಗಳು ಖಚಿತ ಪಡೆಸಿವೆ

ಸಿದ್ದರಾಮಯ್ಯ ಸರಕಾರದಲ್ಲಿ ಮೂರು ವರ್ಷಗಳ ಕಾಲ ಸರ್ಮಥವಾಗಿ ಉಸ್ತುವಾರಿ ನಿಭಾಯಿಸಿದ ಅನುಭವ ಹೊಂದಿರುವ ಸತೀಶಗೆ ಜೆಡಿಎಸ ನಾಯಕ ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೆಗೌಡರ ಅಭಯ ಹಸ್ತ ಇರುವುದು ಇಲ್ಲಿ ಉಲ್ಲೇಖನೀಯ .

ವರ್ಕೌಟ ಆದಲಿದೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ : ದೋಸ್ತಿ ಸರಕಾರದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಲು ಸತೀಶ ಜಾರಕಿಹೊಳಿ ಅವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಹುದೊಡ್ಡ ವರದಾನವಾಗಿದೆ ಈ ಲೋಕಸಭಾ ಭಾಗದಿಂದ ಮಂತ್ರಿ ಸ್ಥಾನ ನಿಭಾಯಿಸಿದ ಅನುಭವ ವಿರುವ ಹಿರಿಯ ನಾಯಕ ಎಂಬ ಹೆಗ್ಗಳಿಕೆ ಸತೀಶ ಅವರದ್ದಾಗಿದೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಮಾನದಂಡದ ಆಧಾರದ ಮೇಲೆ ಮಹಿಳಾ ಕೋಟಾದಲ್ಲಿ ಹೈಕಮಾಂಡ್ ದಲ್ಲಿ ಪ್ರಭಾವ ಹೊಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ . ಇಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಅನುಭವ ಮತ್ತು ಪಕ್ಷ ಸಂಘಟನೆಯ ಅಘಾಧ ಅನುಭವ ವಿದ್ದರೂ ಸಹ ಒಂದೇ ಕುಂಟುಂಬದಲ್ಲಿ ಇಬ್ಬರಿಗೆ ಸಚಿವ ಸ್ಥಾನ ದೊರೆಯುವುದು ಅಷ್ಷು ಸುಲಭವಲ್ಲ ವಾದ್ದುದರಿಂದ ಅನುಭವ ಇಲ್ಲಿ ವರ್ಕೌಟ ಆಗುವುದಿಲ್ಲಾ ಹೀಗಾಗಿ ಸತೀಶ ಜಾರಕಿಹೊಳಿ ಅವರು ಸುಲಭವಾಗಿ ಮಂತ್ರಿಸ್ಥಾನ ಪಡೆದು ಜಿಲ್ಲಾ ಉಸ್ತುವಾರಿ ನಿಭಾಯಿಸಲ್ಲಿದ್ದಾರೆ ಎಂಬ ವಿಷಯ ರಾಜ್ಯ ಮಟ್ಟದಲ್ಲಿ ದಟ್ಟವಾಗಿ ಹರಿದಾಡುತ್ತಿದೆ . ಯಾವುದಕ್ಕೂ ಮೂರನಾಲ್ಕು ದಿನಗಳಲ್ಲಿ ತೆರೆ ಬಿಳಲಿದೆ

Related posts: