ಗೋಕಾಕ:ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ
ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ
ಗೋಕಾಕ ಮೇ 23 : ಜೆಡಿಎಸ್ , ಕಾಂಗ್ರೇಸ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ವಿರೋಧಿಸಿ ಬುಧವಾರದಂದು ಬಿಜೆಪಿವತಿಯಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಜನಮತ ವಿರೋಧಿ ದಿನ ಆಚರಿಸಲಾಯಿತು
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಇಂದು ರಚನೆಯಾಗುತ್ತಿರುವ ಮೈತ್ರಿ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು
ಜನರಿಂದ ತಿರಸ್ಕೃತ ಗೊಂಡಿರುವ ಕಾಂಗ್ರೇಸ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿರುವುದು ತರವಲ್ಲ ಈ ಅಪವಿತ್ರ ಸರಕಾರ ಬಹಳದಿನಗಳ ಕಾಲ ತಾಳಲಾರದು ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿಯಿಂದ ನಡೆದ ಕರಾಳದಿನದಲ್ಲಿ ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ ಎಲ್. ಮುತ್ತೆನ್ನವರ , ಶಶಿಧರ ದೇಮಶೇಟ್ಟಿ , ಪ್ರಮೋದ ಜೋಶಿ , ವಿರೂಪಾಕ್ಷ ಯಲಿಗಾರ , ಅಶೋಕ ಓಸ್ವಾಲ , ಶ್ರೀದೇವಿ ತಡಕೋಡ , ರಾಜು ಜಾನಧ , ಸುನೀಲ ಮುರ್ಕೀಬಾಂವಿ , ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು