RNI NO. KARKAN/2006/27779|Saturday, October 19, 2024
You are here: Home » breaking news » ಬೈಲಹೊಂಗಲ:ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ

ಬೈಲಹೊಂಗಲ:ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ 

ನೇಗಿನಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯೋಜಿಸಿದ್ದ ತೀವೃತರ ಅತೀಸಾರ ಬೇದಿ ನಿಯಂತ್ರಣದ ಮಾತ್ರೆಗಳನ್ನು ವೈದ್ಯಾಧಿಕಾರಿ ಡಾ ಸಂತೋಷ ಹಸರಗುಂಡಿಗಿ ಉದ್ಘಾಟಿಸಿದರು.

ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ
ನೇಗಿನಹಾಳ ಮೇ 29 : ಅತಿಸಾರ ಬೇಧಿಯು ಐದು ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಿದ್ದು ಇತಂಹ ಸಂದರ್ಭದಲ್ಲಿ ಓಆರ್‍ಎಸ್ ಹಾಗೂ ಜಿಂಕ ಮಾತ್ರೆಗಳನ್ನು ಬಳಸಿ ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕೆಂದು ನೇಗಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂತೋಷ ಹಸಿರಗುಂಡಗಿ ಸಲಹೆ ನೀಡಿದರು.
ನೇಗಿನಹಾಳ ಗ್ರಾಮದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ತೀವೃತರ ಅತೀಸಾರ ಬೇದಿ ನಿಯಂತ್ರಣದ ಪಾಕ್ಷಿಕ ಅಂಗವಾಗಿ ಆಯೋಜಿಸಿದ್ದ ಓಆರ್‍ಎಸ್ ಹಾಗೂ ಜಿಂಕ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಿಯಾದ ಸಮಯದಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಿ ಮಕ್ಕಳ ಆರೋಗ್ಯವನ್ನು ಸಂರಕ್ಷಿಸಲು ತಾಯಂದಿರಿಗೆ ಪ್ರತಿಯೊಬ್ಬರು ತಿಳುವಳಿಕೆ ನೀಡಬೇಕಂದರು. ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಿಂದ ಆಗಮಿಸಿದ್ದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೋಮಶೇಖರ ಮುತ್ನಾಳ ಮಾತನಾಡಿ ಓಆರ್‍ಎಸ್ ತಯಾರಿಸುವ ವಿಧಾನ, ಪರಿಸರದ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ವಿವರಿಸಿ ಮಕ್ಕಳ ಮರಣದ ಪ್ರಮಾಣ ಕಡಿಮೆಯಾಗಲು ಸಹಾಯಕ ಎಂದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ಗಂಗಪ್ಪ ಕಲ್ಲೋಳ್ಳಿ, ಔಷಧಿ ವಿತರಕ ಮಹಾದೇವ ಕುಂದರಗಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಪಿ ಪ್ರೇಮಾಕುಮಾರಿ, ತಲ್ಲೂರ, ಬಡಿಗೇರ, ಆರೇರ ಹಾಗೂ ಆಸ್ಪತ್ರೆಯ ಸಿಬ್ಬಂದ್ದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Related posts: