ಮೂಡಲಗಿ:ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗಾಧರ
ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗಾಧರ
ಮೂಡಲಗಿ ಮೇ 30 : ಮೂಡಲಗಿ ವಲಯ ವ್ಯಾಪ್ತಿಯ ವಡೇರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶಿವಾನಂದ ಹೊಸಟ್ಟಿ, ಸಿದ್ದಪ್ಪ ಹೊಸಟ್ಟಿ ಮಾಡಿರುವ ಕಾರ್ಯ ಮೆಚ್ಚುವಂತಹದು. ತಮ್ಮ ಜೀವದ ಹಂಗು ತೋರೆದು ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವದು ಅವರ ದೈರ್ಯ ಸಾಹಸ ಮೆಚ್ಚುವಂತಹದಾಗಿದೆ ಎಂದು ಮೂಡಲಗಿ ಬಿ.ಇಒ ಎ.ಸಿ ಗಂಗಾಧರ ಹೇಳಿದರು.
ಅವರು ಬುಧವಾರ ಸಮೀಪದ ವಡೇರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಂಸೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ವಿದ್ಯುತ್, ನೀರು, ಬೆಂಕಿ ಈ ಮೂರು ಅವಘಡಗಳಿಂದ ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತವೆ. ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾಣಾಪಾಯದಿಂದ ಕಾಪಾಡುವದು ಪಾಲಕರ ಶಿಕ್ಷಕರ ಸಮಾಜದ ಆದ್ಯ ಕರ್ತವ್ಯವಾಗಿದೆ.
ಸ್ಥಳೀಯ ನವೀನ ಬಾಲನ್ನವರ, ಮನೋಜ ಭಜಂತ್ರಿ ಎಂಬ ವಿದ್ಯಾರ್ಥಿಗಳು ರಜೆಯ ಅವಧಿಯಲ್ಲಿ ಹಳ್ಳದ ರಬಸಕ್ಕೆ ಸಿಲುಕಿದಾಗ ಶಿವಾನಂದ ಹೊಸಟ್ಟಿ, ಸಿದ್ದಪ್ಪ ಹೊಸಟ್ಟಿ ಎಂಬ ವಿದ್ಯಾರ್ಥಿಗಳು ರಕ್ಷಿಸಿರುವದು ಪ್ರಶಂಸಾರ್ಹವಾಗಿದೆ. ಇಂತಹ ದೈರ್ಯ, ಪರೋಪಕಾರದ ಗುಣ ಮೆಚ್ಚುವಂತಹದಾಗಿದೆ. ಮುಂಬರುವ ದಿಗಳಲ್ಲಿ ಶಾಲೆ ಹಾಗೂ ಇತರೆ ಸ್ಥಳಗಳಲ್ಲಿ ಅವಘಡಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೋಳ್ಳ ಬೇಕೆಂದು ಹೇಳಿದರು.
ದೂಪದಾಳದ ಸುವರ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರ ವಡೇರಟ್ಟಿ ಮಾತನಾಡಿ, ರಜೆಯ ಅವಧಿಯಲ್ಲಿ ಸಾಹಸಿ ಮಕ್ಕಳು ನಮ್ಮೂರಿಗೆ ಆಗಮಿಸಿದಾಗ ಈ ಪ್ರಕರಣ ಗೊತ್ತಾಯಿತು. ಮಕ್ಕಳ ದೈರ್ಯ ಹಾಗೂ ಅವರ ತೀಕ್ಷ್ಣ ವಿಚಾರ ಮಾಡಿರುವದರಿಂದ ಇಬ್ಬರು ಮಕ್ಕಳು ಜೀವಂತವಾಗಿದ್ದಾರೆಂದು ಮಕ್ಕಳನ್ನು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಮಕ್ಕಳ ಈ ಸಾಧನೆಯನ್ನು ಮೆಚ್ಚಿ ಶೌರ್ಯ ಪ್ರಶಸ್ತಿಗೆ ಶಿಪಾರಸ್ಸು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಗೋಪಾಲ ಕುದರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ವಿ.ಎಸ್ ಜೋಕಾನಟ್ಟಿ, ನಂದಕಿಶೋರ ಗೌಡರ, ಬಿ.ಆರ್.ಪಿ ಕೆ.ಎಲ್ ಮೀಶಿ, ಸಿ.ಆರ್.ಪಿ ಗುಡೆನ್ನವರ, ಎಸ್.ಎ ಸಾರಾಪೂರ, ಎಸ್.ಬಿ ಮುನ್ಯಾಳ, ಪ್ರ.ಗು ಗಳಾದ ಕೆ.ಜಿ ಪೂಜೇರಿ, ಸಂತೋಷ ಪಾಟೀಲ, ಕೆ.ಜಿ.ಬಿ.ವಿ ಮುಖ್ಯೋಪಾದ್ಯಾಯಿ ಎಮ್.ಕೆ ಶಿರಗೂರ, ಶಿಕ್ಷಕರಾದ ಎಸ್.ಎಚ್ ಪೋತದಾರ, ಎಚ್.ಪಿ ಬಮ್ಮನಳ್ಳಿ, ಎಸ್.ಆರ್ ವಾಲಿಕಾರ, ರಾಜೇಶ್ವರಿ ವಿ.ಪಿ, ಬಿ.ಎಲ್ ಜೊಡಟ್ಟಿ, ಪಿ.ಜಿ ಗುಡದವರ, ಎನ್.ವಾಯ್ ಅಜಗುಂಡಿ ಹಾಗೂ ವಿದ್ಯಾರ್ಥಿಗಳು ಪಾಲಕ ಪೋಷಕರು ಉಪಸ್ಥಿತರಿದ್ದರು.