ಘಟಪ್ರಭಾ:ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ ಮನವಿ
ಧುಪದಾಳ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಲು ಆಗ್ರಹಿಸಿ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರವೇ ಧುಪದಾಳ ಗ್ರಾಮ ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ ಮನವಿ
ಘಟಪ್ರಭಾ ಮೇ 30 : ಸಮೀಪದ ಧುಪದಾಳ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಲು ಆಗ್ರಹಿಸಿ ಬುಧವಾರದಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಗ್ರಾಮ ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಧುಪದಾಳ ಗ್ರಾಮದ ಹಾಗೂ ಸುತ್ತಮುತ್ತಲಿನ ತೋಟಗಳಿಂದ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಪ್ರೌಢಶಾಲಾ ವ್ಯಾಸಂಗಕ್ಕಾಗಿ ಘಟಪ್ರಭಾ ಪಟ್ಟಣಕ್ಕೆ ಹೋಗುತ್ತಿರುವುದು ದೂರವಾಗಿದ್ದು, ಕೆಲ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸದೇ ಮನೆಯಲ್ಲಿ ಇದ್ದಾರೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂದು ಕರವೇ ಕಾರ್ಯಕರ್ತರು ಹೊಸ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರೆಹಮಾನ್ ಮೊಕಾಶಿ, ಅಮೀರ ಖಾನ್ ಜಗದಾಳ, ರಾಜು ಗಾಡಿವಡ್ಡರ, ಯಮನಪ್ಪ ಗಾಡಿವಡ್ಡರ, ಶಶಿ ಪಾಟೀಲ, ಇದ್ದರು.