RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ

ಗೋಕಾಕ:ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ 

ಸಂಗ್ರಹ ಚಿತ್ರ

ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ

ಬೆಟಗೇರಿ ಜೂ 1 : ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಶು ಚಿಕಿತ್ಸಾಲಯ ಇವರ ಸಹಯೋಗದಲ್ಲಿ ಇದೇ ಶುಕ್ರವಾರ ಜೂ.1 ರಂದು ನಡೆದ ಮನೆ ಮನೆಗೆ ತೆರಳಿ ಜಾನುವಾರಗಳಿಗೆ ಕಾಲುಬಾಯಿ ಬೇನೆ ನಿರ್ಮೂಲನೆಗಾಗಿ 14 ನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಧರೆಪ್ಪ ಹೊಸಮನಿ ಆಕಳು ಒಂದಕ್ಕೆ ಕಾಲುಬಾಯಿ ಬೇನೆ ಲಸಿಕೆ ನೀಡುವದರ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಲುಬಾಯಿ ರೋಗದ ಲಕ್ಷಣಗಳು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಹೇಳಿದರು.
ಇಲ್ಲಿಯ ಪಶು ವೈದ್ಯಕೀಯ ಪರೀಕ್ಷಕ ಬಿ.ಬಿ.ಪೂಜೇರಿ ಮಾತನಾಡಿ, ಇಂದಿನಿಂದ (ಜೂ.1ರಿಂದ) ಸುಮಾರು 25 ದಿನಗಳವರೆಗೆ ಸ್ಥಳೀಯ ಪಶು ಚಿಕಿತ್ಸಾಲಯ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಇನ್ನೂ ಸುತ್ತಲಿನ ಹಲವು ಹಳ್ಳಿಗಳಲ್ಲಿರುವ ಜಾನುವಾರುಗಳಿಗೂ ಸಹ ಕಾಲುಬಾಯಿ ಬೇನೆ ಲಸಿಕೆ ನೀಡಲಾಗುವುದು ಸ್ಥಳೀಯ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಬಿ. ಆರ್. ಮಠಪತಿ, ಓ.ಬಿ.ಬಾಳೋಜಿ, ಎನ್.ಡಿ. ಪತ್ತಾರ, ಉದ್ದಪ್ಪ ಗೋದಿ, ಪ್ರಕಾಶ ಪಾಟೀಲ, ಶಿವಾನಂದ ದೇಯಣ್ಣವರ, ಬಸವರಾಜ ಆಯಟ್ಟಿ, ರಂಗಪ್ಪ ಮಾಳ್ಯಾಗೋಳ ಸ್ಥಳೀಯ ರೈತರು, ಪಶು ಚಿಕಿತ್ಸಾಲಯದ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಇದ್ದರು.

Related posts: