RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ

ಗೋಕಾಕ:ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ 

ಗ್ರಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಿಡಿಒ ಬಿ.ಎಫ್.ದಳವಾಯಿ ಭೆಟ್ಟಿ ನೀಡಿ, ಕೆಲಸ ಪರೀಸಿಲನೆ ಮಾಡಿದರು.

ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ

ಬೆಟಗೇರಿ ಜೂ 2 : ಗ್ರಾಮ ಪಂಚಾಯತ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು. ಊರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಬಿ.ಎಫ್.ದಳವಾಯಿ ಹೇಳಿದರು.
ಶನಿವಾರ ಜೂ.2 ರಂದು ಗ್ರಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೆಟ್ಟಿ ನೀಡಿ, ಕೆಲಸ ಪರೀಸಿಲನೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ಥಳೀಯ ಗ್ರಾಮ ಪಂಚಾಯತದ 14 ನೇ ಹಣಕಾಸಿನ ಯೋಜನೆಯಡಿಯ ಅನುದಾನದಲ್ಲಿ ಸುಮಾರು 1 ಲಕ್ಷ ರೂ. ಗಳ ವೆಚ್ಚದಲ್ಲಿ ಗ್ರಾಮದ ಪ್ರಮುಖ ಬೀದಿ ರಸ್ತೆಗಳಿಗೆ ಅಡ್ಡಲಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಇದೇ ಶನಿವಾರ ಜೂ.2 ರಿಂದ ಜೂ.5 ರವರೆಗೆ ಗ್ರಾಮದಲ್ಲಿ ನಡೆಯಲಿರುವ ಶ್ರೀ ಹನುಮಂತ ದೇವರ ಓಕುಳಿ ಪ್ರಯುಕ್ತ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಮಾರ್ಗದರ್ಶನದಂತೆ ಗ್ರಾಮದ ಬೀದಿ ದೀಪ ರಿಪೇರಿ, ನೂತನ ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರು ಸರಬುರಾಜು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಇಲ್ಲಿಯ ನಾಗರಿಕರಿಗೆ ಕಲ್ಪಿಸಲಾಗಿದೆ ಎಂದು ಪಿಡಿಒ ದಳವಾಯಿ ತಿಳಿಸಿದರು.
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ, ಕಾಕ್ರ್ಲ ಸುರೇಶ ಬಾಣಸಿ, ಮೆಳೆಪ್ಪ ಹರಿಜನ, ರಾಮಣ್ಣ ದಂಡಿನ, ಮಲ್ಲಪ್ಪ ಬಸಪ್ರಭು, ವಿಠಲ ವೆಂಕಟಾಪೂರ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ಇತರರು ಇದ್ದರು.
ಪೋಟೊ : 2 ಬಿಟಿಜಿ-1
ಬೆಟಗೇರಿ: ಗ್ರಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಿಡಿಒ ಬಿ.ಎಫ್.ದಳವಾಯಿ ಭೆಟ್ಟಿ ನೀಡಿ, ಕೆಲಸ ಪರೀಸಿಲನೆ ಮಾಡಿದರು.
ಬೆಟಗೇರಿ: ಗ್ರಾಮದ ಗ್ರಾಮ ಪಂಚಾಯತ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು. ಊರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಬಿ.ಎಫ್.ದಳವಾಯಿ ಹೇಳಿದರು.

Related posts: