RNI NO. KARKAN/2006/27779|Saturday, October 19, 2024
You are here: Home » breaking news » ಕಿತ್ತೂರ :ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ

ಕಿತ್ತೂರ :ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ 

ವಿಶ್ವ ಪರಿಸರ ದಿನ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡುತ್ತಿರುವ ವಿದ್ಯಾರ್ಥಿನೀಯರು

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ
ಕಿತ್ತೂರ ಜೂ 5 : ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಾಗರಗಾಳಿ ಎಸಿಎಫ್ ಮಾರುತಿ ಪಾತ್ರೋಟ ಹೇಳಿದರು
ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರದಂದು ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ಬೀಜ ವಿತರಣಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು

ಪರಿಸರ ಉಳಿಸಿ ಬೆಳೆಸುವುದು ಬರಿ ಅರಣ್ಯ ಇಲಾಖೆಯ ಕರ್ತವ್ಯವಾಗದೆ ಪ್ರತಿಯೊಬ್ಬರ ಜವಾಬ್ದಾರಿ ಯಾಗಬೇಕಾಗಿದೆ ಆಗ ಭವ್ಯ ಪರಿಸರವನ್ನು ಉಳಿಸಿ ಬೆಳೆಸಲು ಸಾದ್ಯ ಆ ದಿಸೆಯಲ್ಲಿ ಪ್ರತಿಯೊಬ್ಬರು ಗಿಡ ನೆಡುವ ಪವಿತ್ರ ಕಾರ್ಯ ಮಾಡಬೇಕೆಂದು ಎಸಿಎಫ್ ಮಾರುತಿ ಪಾತ್ರೋಟ ಹೇಳಿದರು

ಸಸಿ ನೆಡುವ ಮೂಲಕ ವಿದ್ಯಾರ್ಥಿನೀಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಕಿತ್ತೂರ ತಹಶೀಲ್ದಾರ್ ಪ್ರವಿಣ ಹುಚ್ಚನವರ , ಪ್ರೊಬಾಶನರಿ ಐಎಫ್ಎಸ್ ಅಧಿಕಾರಿ ಆಶಿಶ್ ರೆಡ್ಡಿ , ಆರ್.ಎಫ್.ಓ ರತ್ನಾಕರ್ ಓಬನ್ನವರ , ಪಟ್ಟಣದ ಪಂಚಾಯತ ಮುಖ್ಯಾಧಿಕಾರಿ ಐ ಕೆ ಗುದಾದಾರಿ , ಅನೀಫ್ ಸೂತಗಟ್ಟಿ , ಕಿರಣ್ ಪಾಟೀಲ್ , ಜಿ ಎಂ ಧುಪಾದ್ , ಪಿಎಸ್ಐ ಮಲ್ಲಿಕಾರ್ಜುನ್ ಕುಲಕರ್ಣಿ , ರಾಘವೇಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು

Related posts: