ಗೋಕಾಕ:ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಡಿ. ದೇವರಾಜ
ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಡಿ. ದೇವರಾಜ
ಗೋಕಾಕ ಜೂ, 5 ;- ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಿ. ದೇವರಾಜ ಹೇಳಿದರು.
ಅವರು, ಮಂಗಳವಾರದಂದು ನಗರದ ಎಪಿಎಮ್‍ಸಿ ರಸ್ತೆಯ ಬದಿಗಳಲ್ಲಿ ಅರಣ್ಯ ಇಲಾಖೆ, ಜೆಸಿಆಯ್ ಸಂಸ್ಥೆ, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಸಿರಿಗನ್ನಡ ಮಹಿಳಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಪತ್ರಕರ್ತರ ಪರಿಷತ್ತು, ಕವಿಗಳ ಸಂಘಟನೆ, ರಾಮಸೇನೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಾನವನ ಬದುಕಿನಲ್ಲಿ ಪರಿಸರ ಮಹ್ತತರ ಪಾತ್ರ ವಹಿಸುತ್ತಿದೆ. ಅರಣ್ಯ ಇಲಾಖೆ ಹಲವಾರು ಯೋಜನೆಗಳೊಂದಿಗೆ ಪರಿಸರ ರಕ್ಷಣೆ ಮಾಡುತ್ತಿದೆ. ಸಾರ್ವಜನಿಕರು ಸಂಘ ಸಂಸ್ಥೆಯವರು ಪರಿಸರ ರಕ್ಷಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಪರಿಸರ ರಕ್ಷಣೆ ಮಾಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರ ಮಗದುಮ್ಮ, ಮಹಾಂತೇಶ ತಾಂವಶಿ, ಸತೀಶ ಬೆಳಗಾವಿ, ದಿಲೀಪ ಮೆಳವಂಕಿ, ಜಿ.ಆರ್.ನಿಡೋಣಿ, ಸುಧಾ ನಿಡೋಣಿ, ವಿಷ್ಣು ಲಾತೂರ, ಕೆಂಪಣ್ಣಾ ಚಿಂಚಲಿ, ಎಸ್.ಎಮ್.ಹತ್ತಿಕಟಗಿ, ಜಿ.ಎಸ್.ಸಿದ್ಧಾಪೂರಮಠ, ವಿಜಯಕುಮಾರ ಬಾಫನಾ, ಪ್ರೇಮಚಂದ ರಾಠೋಡ, ಡಾ. ರಮೇಶ ಪಟಗುಂದಿ, ರಜನಿ ಜೀರಗ್ಯಾಳ, ಸಂಗೀತಾ ಬನ್ನೂರ, ವೈಶಾಲಿ ಭರಭರಿ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಉಪ ವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ, ಅಡಿವೆಪ್ಪಾ ಕಿತ್ತೂರ ಸೇರಿದಂತೆ ಅನೇಕರು ಇದ್ದರು.