ಗೋಕಾಕ :ವಿಶ್ವ ಪರಿಸರ ದಿನ ಅಂಗವಾಗಿ ನದಿ ಸ್ವಚ್ಛ ಗೋಳಿಸಿದ ರಾಕೆಟ್ ರಿದ್ದಿ ಸಿದ್ದಿ ಸಿಬ್ಬಂದಿ
ವಿಶ್ವ ಪರಿಸರ ದಿನ ಅಂಗವಾಗಿ ನದಿ ಸ್ವಚ್ಛ ಗೋಳಿಸಿದ ರಾಕೆಟ್ ರಿದ್ದಿ ಸಿದ್ದಿ ಸಿಬ್ಬಂದಿಯರು
ಗೋಕಾಕ ಜೂ 6 : ವಿಶ್ವ ಪರಿಸರ ದಿನ ಅಂಗವಾಗಿ ಇಲ್ಲಿಯ ರಾಕೆಟ್ ರಿದ್ದಿ ಸಿದ್ದಿ ಪ್ರೈವೇಟ್ ಲಿಮಿಟೆಡ್ ನ ಸಿಬ್ಬಂದಿಗಳಿಂದ ನದಿ ಸ್ವಚ್ಛತಾ ಅಭಿಯಾನ ಕೈಗೋಳಲಾಯಿತು
ಬುಧವಾರದಂದು ಮುಂಜಾನೆ ನಗರದ ಮಾರ್ಕಂಡೇಯ ನದಿಯಲ್ಲಿ ಸೇರಿದ ರಾಕೆಟ್ ರಿದ್ದಿ ಸಿದ್ದಿ ಕಾರರ್ಖಾನೆಯ ಸಿಬ್ಬಂದಿಗಳು ಜೆಸಿಬಿ ಬಳಸಿ ನದಿಯಲ್ಲಿ ಬೆಳದ ವಿಷಕಾರಿ ಬಳ್ಳಿ ಮತ್ತು ತ್ಯಾಜ್ಯ ವಸ್ತುಗಳನ್ನು ತೆಗೆದು ನದಿಯನ್ನು ಸ್ವಚ್ಛ ಗೋಳಿಸಿದರು
ಒಂದು ದಿನದ ಮಟ್ಟಿಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಕಾರರ್ಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರಮದಾನ ನಡೆಯಿಸಿ ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ನದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ತಿಳಿ ಹೇಳಿದರು