ಗೋಕಾಕ :ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “
ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “
ಗೋಕಾಕ ಜೂ 7 : ಇದೇ ಜೂ 9 ರಂದು ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಸಿದ್ದಲಿಂಗೇಶ್ವರ (ಬಿಸಿಎ) ಮಹಾವಿದ್ಯಾಲಯದಲ್ಲಿ “ಕ್ಯಾಂಪಸ್ ಡ್ರೈವ್ ” ಸ್ಕೀಲ್ ಇಂಡಿಯಾ ಮೇಘಾ ಏಂಪ್ಲಾಯ ಎಬಿಲಿಟಿ ಪ್ರೋಗ್ರಾಮ್ ಹಮ್ಮಿಕೋಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಚೇರಮನ್ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮನಿಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಮಾಹಿತಿ ನೀಡಿದರು
ಗುರುವಾರದಂದು ನಗರದ ಶ್ಯೂನ ಸಂಪಾದನ ಮಠದಲ್ಲಿ ಕರೆದ್ದಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಈ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ನಮ್ಮ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ 10 ನೇ ವರ್ಷ ಪಾದಾರ್ಪಣೆ ಮಾಡುತ್ತಿದ್ದು ಇದರ ಸವಿ ನೆನಪಿಗಾಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ “ಕ್ಯಾಂಪಸ್ ಡ್ರೈವ್” ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ . ಜೂನ 9 ಶನಿವಾರದಂದು ಮಹಾವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರವರಗೆ ಸ್ಕೀಲ್ ಇಂಡಿಯಾ ಮೇಘಾ ಏಂಪ್ಲಾಯ ಎಬಿಲಿಟಿ ಪ್ರೋಗ್ರಾಮ್ ನಡೆಯಲಿದ್ದು ಇದರಲ್ಲಿ ಎಸಿಟಿ , ಜೆಸಿಆರ್ ಟೆಕ್ನಾಲಜಿ , ಬೀಟ್ಸ್ ಹಾಗೂ ಟೇಲಿಇಂಡಿಯಾ ದಂತಹ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ . ಈ ಕಾರ್ಯಕ್ರಮದಲ್ಲಿ ಖುದ್ದು ಕಂಪನಿಗಳ ಸಿಇಓ ಗಳು ಉಪಸ್ಥಿತರಿದ್ದು ಸಂದರ್ಶನ ನಡೆಸಲ್ಲಿದಾರೆ . ಗೋಕಾಕನಲ್ಲಿ ಇದು ಪ್ರಥಮ ಪ್ರಯೋಗವಾಗಿದ್ದು , ನಗರದ ಎಲ್ಲ ಕಾಲೇಜಿನ ಮುಖ್ಯಸ್ಥರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ . ಈ ಪ್ರೋಗ್ರಾಮ್ ದಲ್ಲಿ ಬಿಎಸಸಿ , ಬಿ.ಕಾಂ , ಬಿಸಿಎ ವಿದ್ಯಾರ್ಥಿಗಳು ಬಾಗವಹಿಸಿ ಉದ್ಯೋಗ ಗಿಟ್ಟಿಸಕೋಳ್ಳಬಹುದಾಗಿದೆ ಎಂದು ಮುರುಘರಾಜೇಂದ್ರ ಶ್ರೀಗಳು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ ಉಪಸ್ಥಿತರಿದ್ದರು