RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ :ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ

ಗೋಕಾಕ :ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ 

ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ

ಗೋಕಾಕ ಜೂ 7 : ನೂತನ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರದಲ್ಲೇ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಹೊಸ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪರ್ತಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಮಾತನಾಡಿದರು

ಈ ಬಾಗದ ಜನರ ಕಳೆದ ಸುಮಾರು ನಾಲ್ಕು ದಶಕಗಳ ಬೇಡಿಕೆಯಾದ ನೂತನ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಹಲವಾರು ಹೋರಾಟಗಳು ನಡೆದಿವೆ ಮತ್ತು ಅವು ನಿರಂತರವಾಗಿ ನಡೆಯುತ್ತಿವೆ ಆದರು ಸಹ ರಾಜ್ಯವನ್ನಾಳುತ್ತಿರುವ ಸರಕಾರಗಳು ಈ ವಿಷಯದ ಬಗ್ಗೆ ಬೇಜವಾಬ ದಾರಿಯುತ ಧೋರಣೆ ತೊರುತ್ತಿದ್ದಾರೆ . ಹೊಸ ಸರಕಾರದಲ್ಲಿ ನೂತನವಾಗಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅತಿ ಶೀಘ್ರದಲ್ಲೇ ಜಿಲ್ಲಾ ಹೋರಾಟವನ್ನು ತೀವ್ರ ಗೋಳಿಸಲಾಗುವುದೆಂದು ಶ್ರೀಗಳು ಹೇಳಿದರು

ನೂತನ ಸಚಿವರಿಗೆ ಶುಭ ಹಾರೈಕೆ : ಇದೇ ಸಂದರ್ಭದಲ್ಲಿ ನೂತನ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶುಭ ಕೋರಿರುವ ಮುರಘರಾಜೇಂದ್ರ ಮಹಾಸ್ವಾಮಿಗಳು ಬಹು ವರ್ಷಗಳಿಂದ ಸಚಿವ ವಂಚಿತವಾಗಿದ್ದ , ಗೋಕಾಕ ಮತಕ್ಷೇತ್ರದಿಂದ ಸತತ ಎರಡನೆಯ ಬಾರಿಗೆ ರಮೇಶ ಜಾರಕಿಹೊಳಿ ಅವರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತೋಷ ತಂದಿದೆ . ಹಿಂದೆ ಸಚಿವರಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದ ಸಚಿವರು ಮುಂದೆಯೂ ಒಳ್ಳೆಯ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ

Related posts: